ಪಾಕಿಸ್ತಾನದ ರಾಜಕಾರಣಿಗಳ ವಿರುದ್ಧ ಹನಿಟ್ರ್ಯಾಪ್‌ಗೆ ನಟಿಯರ ಬಳಕೆ

ಇಸ್ಲಾಮಾಬಾದ್: ಪಾಕಿಸ್ತಾನದ ರಾಜಕಾರಣಿಗಳ ವಿರುದ್ಧ ಹನಿಟ್ರ್ಯಾಪ್‌ಗಾಗಿ ನಟಿಯರನ್ನು ಬಳಕೆ ಮಾಡಲಾಗುತ್ತದೆ. ನಟಿ ಸಜಲ್ ಅಲಿ ಕೂಡ ಅದರ ಭಾಗವಾಗಿದ್ದರು ಎಂದು ನಿವೃತ್ತ ಸೇನಾಧಿಕಾರಿ ಅದಿಲ್ ರಾಜಾ ಮಾಡಿದ ಆರೋಪ ಈಗ ಕೋಲಾಹಲಕ್ಕೆ ಕಾರಣವಾಗಿದೆ.
ಭಾರತದ ನೆರೆಯ ರಾಷ್ಟ್ರದ ಸಿನಿಮಾ ನಟಿ ಸಜಲ್ ಅಲಿ ಈ ಹೇಳಿಕೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ನಾನು ಅಂಥ ಜಾಲದಲ್ಲಿ ಒಳಗೊಂಡಿಲ್ಲ. ದೇಶ ನೈತಿಕವಾಗಿ ಅಧಃಪತನದತ್ತ ಸಾಗುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.
ಅದಿಲ್ ರಾಜಾ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ಸಾಜಲ್ ಸೇರಿದಂತೆ ಪಾಕಿಸ್ತಾನದ ಕೆಲವು ನಟಿಯರು, ನಿವೃತ್ತ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಸೇರಿದಂತೆ ಪ್ರಮುಖರು ಇಂಥ ಜಾಲದಲ್ಲಿದ್ದಾರೆ ಎಂದು ಹೇಳಿದ್ದರು.