ರಿಷಿ ಸುನಕ್ ಭಾರತದಲ್ಲಿ ಇರುತ್ತಿದ್ದರೆ ರಾಜಕೀಯದ ಹಿಂಬಾಲಕರಾಗಿ ಇರುತ್ತಿದ್ದರು; ಶಶಿ ತರೂರ್

ನವದೆಹಲಿ: ಬ್ರಿಟನ್ನ ನೂತನ ಪ್ರಧಾನಿ ರಿಷಿ ಸುನಕ್ ಭಾರತದ ರಾಜಕೀಯದಲ್ಲಿರುತ್ತಿದ್ದರೆ, ರಾಜಕೀಯದ ಹಿಂಬಾಲಕರಾಗಿ ಅಷ್ಟೇ ಇರುತ್ತಿದ್ದರು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಖಾಸಗಿ ಸಂದರ್ಶನದಲ್ಲಿ ಶಶಿ ತರೂರ್ ಮಾತನಾಡುತ್ತಾ, ಭಾರತೀಯ ಮೂಲದ ವ್ಯಕ್ತಿಯೊಬ್ಬ ವಿಶ್ವದ ಅತ್ಯಂತ ಶಕ್ತಿಯುತ ಕಚೇರಿಯನ್ನು ಪ್ರವೇಶಿಸುವುದು ಅಪರೂಪದ ಘಟನೆ.
ಬ್ರಿಟನ್ನ ಆರ್ಥಿಕತೆ ಸಮರ್ಥವಾಗಿ ಮುನ್ನಡೆಯುವವರೆಗೂ ರಿಷಿ ಸುನಕ್ ಅವರನ್ನು ಅಲ್ಲಿನ ಜನರು ಸ್ವೀಕರಿಸುತ್ತಾರೆ. ಮುಖ್ಯವಾಗಿ ಸುನಕ್ ಭಾರತೀಯ ಮೂಲದವರೇ ಆಗಿರಬಹುದು. ಹೀಗಾಗಿ ಭಾರತದತ್ತ ಒಲವು ಇರುವುದು ಸಹಜ. ಆದರೆ ಭಾರತವನ್ನು ಗಮನದಲ್ಲಿಟ್ಟುಕೊಂಡು ಬ್ರಿಟನ್ನಲ್ಲಿ ಆಡಳಿತ ಮಾಡಲು ಸಾಧ್ಯವಿಲ್ಲ. ಬ್ರಿಟನ್ನ ಆದ್ಯತೆಗಳಿಗೆ ಅನುಗುಣವಾಗಿ ನೀತಿ, ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಶಶಿ ತರೂರ್ ಹೇಳಿದ್ದಾರೆ.