ಈ ಊರಲ್ಲಿ 2 ಅಂತಸ್ತಿನ ಮನೆ ಕಟ್ಟೋದೇ ಇಲ್ಲ!

ಈ ಊರಲ್ಲಿ 2 ಅಂತಸ್ತಿನ ಮನೆ ಕಟ್ಟೋದೇ ಇಲ್ಲ!
ಲಬುರಗಿ: ಊರೆಲ್ಲ ಸುತ್ತಿದ್ರೂ ಒಂದೇ ಒಂದು ಮನೆಲೂ ಎರಡು ಅಂತಸ್ತಿಲ್ಲ. ನೀವೂ ಈ ಊರಲ್ಲಿ ಉಳಿಬೇಕಂದ್ರೆ ಬೇರೆ ಏನ್ ಬೇಕಾದ್ರೂ ಮಾಡ್ಬಹುದು, ಆದ್ರೆ ಎರಡು ಅಂತಸ್ತಿರೋ ಮನೇನ ಮಾತ್ರ ಕಟ್ಟೋಹಾಗಿಲ್ಲ. ಹಾಗಂತ ಈ ಊರ್ ಮಂದಿಗೇನು ಬಡತನವಿಲ್ಲ. ಈ ಗ್ರಾಮದ ಮಂದಿಯ ದೈವಭಕ್ತಿಯೇ ಡಬಲ್ ಫ್ಲೋರ್ ಮನೆಯನ್ನ ಕಟ್ಟದಂತೆ ಎಚ್ಚರಿಸುತ್ತಾ ಬಂದಿದೆ.
ಈ ಹಜರತ್ ಮೀಠಾ ವಲಿ ಶಾ ದರ್ಗಾದ ಕರಾಮತ್ತು. ಕಲಬುರಗಿಯ (Kalaburagi) ಕೊಳ್ಳೂರು ಗ್ರಾಮದಲ್ಲಿ ಮನೆ ಕಟ್ಟೋದಾದ್ರೂ, ಅಪ್ಪಿ ತಪ್ಪಿ ಎರಡು ಅಂತಸ್ತಿನ ಮನೆ ಕಟ್ಟುವಂತಿಲ್ಲ. ಒಂದು ವೇಳೆ ಕಟ್ಟಿದ್ರೂ ಅದ್ರ ಪರಿಣಾಮ ನೆಟ್ಟಗಿರೋದಿಲ್ವಂತೆ. ಹೀಗಂತ ಶತಮಾನಗಳಿಂದ ಈ ಭಾಗದ ಮಂದಿ (Kalaburagi Village) ನಂಬಿಕೊಂಡು ಬಂದಿದ್ದಾರೆ. ಅದ್ಕೆ ಕಾರಣವೇ ಈ ಹಜರತ್ ಮೀಠಾ ವಲಿ ಶಾ ದರ್ಗಾ.

ಹಜರತ್ ಮೀಠಾ ವಲಿ ಶಾ ದರ್ಗಾ ಮುಸ್ಲಿಮರ ಆರಾಧನಾ ಕೇಂದ್ರವಾದ್ರೂ ಕೊಳ್ಳೂರು ಗ್ರಾಮದಲ್ಲಿ ನೆಲೆಸಿರುವ ಎಲ್ಲ ಧರ್ಮೀಯರು ಈ ದರ್ಗಾದ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಹೀಗಾಗಿ ಯಾರೇ ಮನೆ ಕಟ್ಟೋದಿದ್ರೂ ನಿಯಮ ಮೀರಲ್ಲ. ದರ್ಗಾವನ್ನು ಮೀರಿ ಯಾರೂ ಮನೆನೂ ಕಟ್ಟಿಕೊಂಡಿಲ್ಲ.

ಎರಡು ಅಂತಸ್ತಿನ ಮನೆ ಕಟ್ಟಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ
ಹಿಂದೆ ಎರಡು ಅಂತಸ್ತಿನ ಮನೆ ಕಟ್ಟಿದ್ರೂ ಆ ಮನೆಗಳು ಕುಸಿದು ಬಿದ್ದ ಉದಾಹರಣೆಗಳಿವೆಯಂತೆ. ಅಂತಹ ಮನೆ ಮಂದಿಗೆ ಆರೋಗ್ಯ ಕೆಟ್ಟ ನಿದರ್ಶಗಳೂ ಇವೆಯಂತೆ. ಇದೆಲ್ಲವೂ ದರ್ಗಾದ ಮೇಲಿರೋ ಜನರ ನಂಬಿಕೆ ಹೆಚ್ಚಿಸಿದೆ. ದರ್ಗಾವನ್ನು ಮೀರಿ ಎತ್ತರದ ಮನೆ ಕಟ್ಟಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋ ನಂಬಿಕೆ ಇವರಲ್ಲಿ ಬೆಳೆದುಬಿಟ್ಟಿದೆ.

ಗ್ರಾಮದ ಐಕ್ಯತೆ ಕಾಪಾಡುತ್ತೆ ದರ್ಗಾ
ಇಷ್ಟು ಮಾತ್ರವಲ್ದೇ ಹಜರತ್ ಮೀಠಾ ವಲಿ ಶಾ ಕೊಳ್ಳೂರು ಗ್ರಾಮದ ಐಕ್ಯತೆ ತಾಣ ಕೂಡಾ. ಕೊಳ್ಳೂರ ಗ್ರಾಮದ ಎಲ್ಲೇ ಹೋದ್ರೂ ಡಬಲ್ ಫ್ಲೋರಿನ ಮನೆ ಕಾಣಸಿಗದು. ಈ ನಂಬಿಕೆಗಳು ಅದೆಷ್ಟು ಸರಿ ಅನ್ನೋದಕ್ಕಿಂತ್ಲೂ ದರ್ಗಾದಿಂದ ಇಲ್ಲಿನ ಸೌಹಾರ್ದತೆ ಶತಮಾನದಿಂದಲೂ ಹೀಗೆ ಉಳಿದುಕೊಂಡು ಬಂದಿದೆ ಅನ್ನೋದೆ ಸಂತಸದ ಸಂಗತಿ.