ಯುಪಿಯಲ್ಲಿ ದೆಹಲಿ ಮಾದರಿಯ ಘಟನೆ : ಸ್ಕೂಟಿಗೆ ಡಿಕ್ಕಿ ಹೊಡೆದು ಶಿಕ್ಷಕಿಯನ್ನು 3 ಕಿಮೀ ಎಳೆದೊಯ್ದ ಟ್ರಕ್, ಮಹಿಳೆ ಸಾವು

ಯುಪಿಯಲ್ಲಿ ದೆಹಲಿ ಮಾದರಿಯ ಘಟನೆ : ಸ್ಕೂಟಿಗೆ ಡಿಕ್ಕಿ ಹೊಡೆದು ಶಿಕ್ಷಕಿಯನ್ನು 3 ಕಿಮೀ ಎಳೆದೊಯ್ದ ಟ್ರಕ್, ಮಹಿಳೆ ಸಾವು

ತ್ತರಪ್ರದೇಶ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣ ಬಳಿಕ ಉತ್ತರಪ್ರದೇಶದಲ್ಲಿ ಅಂತಹದ್ದೆ ಘಟನೆಯೊಂದು ವರದಿಯಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಇಂದು ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳಾ ಶಿಕ್ಷಕಿಯೋರ್ವರು ಟ್ರಕ್ ಗೆ ಡಿಕ್ಕಿ ಹೊಡೆದಿತ್ತು.

ಪರಿಣಾಮ ಆಕೆಯ ದೇಹ ಟ್ರಕ್ ಕೆಳಗೆ ಸಿಲುಕಿ ಸುಮಾರು 3 ಕಿಮೀ ಗಟ್ಟಲೇ ಎಳೆದೊಯ್ದಿದಿತ್ತು ಎಂದು ತಿಳಿದು ಬಂದಿದೆ. ಈ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಾವಾಯಿ ಬುಜುರ್ಗ್ ಗ್ರಾಮದಲ್ಲಿ ನಡೆದಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಮಹಿಳೆಯ ದೇಹವು ಸಿಲುಕಿಕೊಂಡಿದ್ದರಿಂದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿತ್ತು ಎನ್ನಲಾಗುತ್ತಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿದ್ದು, ಬೆಂಕಿಯನ್ನು ನಂದಿಸಿ ಮೃತರ ದೇಹಗಳನ್ನು ಟ್ರಕ್‌ನಿಂದ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.