ಶೀಘ್ರದಲ್ಲೇ ಜಿಕಾ ವೈರಸ್ ವಿರುದ್ಧದ ಲಸಿಕೆ ಲಭ್ಯ: ಎನ್‌ಟಿಜಿಐ ಮುಖ್ಯಸ್ಥ

ಝಿಕಾ ವೈರಸ್ ಈಡಿಸ್ ಎಂಬ ಸೋಂಕಿತ ಸೊಳ್ಳೆಯ ಕಚ್ಚುವಿಕೆಯ ಮೂಲಕ ಹರಡುತ್ತದೆ. ಈ ಸೊಳ್ಳೆಯು ಡೆಂಗ್ಯೂ & ಚಿಕೂನ್‌ಗುನ್ಯಾಕ್ಕೂ ಕಾರಣವಾಗುತ್ತದೆ. ಈಡಿಸ್ ಸೊಳ್ಳೆಗಳು ಹಗಲಿನಲ್ಲಿ ಸಕ್ರಿಯವಾಗಿ ಮನುಷ್ಯರನ್ನು ಕಚ್ಚುತ್ತವೆ. ಝಿಕಾ ವೈರಸ್ ವಿರುದ್ಧ ಲಸಿಕೆ ರಚಿಸಲು ಸಂಶೋಧನೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಝಿಕಾ ವೈರಸ್ ವಿರುದ್ಧ ಶೀಘ್ರದಲ್ಲೇ ಲಸಿಕೆ ಲಭ್ಯವಾಗಲಿದೆ ಎಂದು ರಾಷ್ಟ್ರೀಯ ಪ್ರತಿರಕ್ಷಣಾ ತಾಂತ್ರಿಕ ಸಲಹಾ ಗುಂಪಿನ(NTGI)ಮುಖ್ಯಸ್ಥ ಡಾ. ಎನ್.ಕೆ ಅರೋರಾ ಹೇಳಿದ್ದಾರೆ.