ಕಾಂಗ್ರೆಸ್ 'ಲವ್ ಜಿಹಾದ್' ಉತೇಜಿಸುತ್ತಿದೆ : ಸಚಿವ ಅಶೋಕ್ ಆರೋಪ

ಕಾಂಗ್ರೆಸ್ 'ಲವ್ ಜಿಹಾದ್' ಉತೇಜಿಸುತ್ತಿದೆ : ಸಚಿವ ಅಶೋಕ್ ಆರೋಪ

ಬೆಳಗಾವಿ,ಡಿ.22- ರಾಜ್ಯದಲ್ಲಿ ಲವ್ ಜಿಹಾದ್ ಉತ್ತೇಜಿಸುವ ಕಾರಣಕ್ಕಾಗಿಯೇ ಬಹುನಿರೀಕ್ಷಿತ ಮತಾಂತರ ನಿಷೇಧ ಕಾಯ್ದೆಗಳನ್ನು ಪ್ರತಿಪಕ್ಷ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

ನಮ್ಮ ಸರ್ಕಾರ ಯಾರನ್ನೂ ಗುರಿಯಾಗಿಟ್ಟುಕೊಂಡು ಈ ಮಸೂದೆ ಜಾರಿ ಮಾಡಿಲ್ಲ. ಕಳ್ಳನ ಮನಸ್ಸು ಒಳಗೊಳಗೆ ಎಂಬಂತೆ ಕಾಂಗ್ರೆಸ್‍ನವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಬೇರೆ ಬೇರೆ ಧರ್ಮಗಳಲ್ಲಿ ಮತಾಂತರವಾಗುವುದನ್ನು ತಡೆಗಟ್ಟುವ ಕಾರಣಕ್ಕಾಗಿಯೇ ಈ ಕಾಯ್ದೆಯನ್ನು ಜಾರಿ ಮಾಡುತ್ತಿದ್ದೇವೆ. ಪ್ರತಿಪಕ್ಷದವರು ವಿರೋಧಿಸದೆ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದರು.

ನಮಗೆ ವಿಧಾನಸಭೆಯಲ್ಲಿ ಬಹುಮತವಿದೆ. ಹಾಗಾಗಿಯೇ ವಿಧೇಯಕವನ್ನು ಜಾರಿಗೆ ತಂದಿದ್ದೇವೆ. ವಿಧಾನಪರಿಷತ್‍ನಲ್ಲಿ ನಮಗೆ ಬಹುಮತದ ಕೊರತೆ ಇದೆ. ಆದರೂ ಅಲ್ಲಿ ಯಾವ ರೀತಿ ಮಸೂದೆಯನ್ನು ಅಂಗೀಕರಿಸಬೇಕು ಎಂಬುದರ ಬಗ್ಗೆ ಕಾರ್ಯತಂತ್ರ ರೂಪಿಸಿದ್ದೇವೆ ಎಂದು ಹೇಳಿದರು.