ಓವೈಸಿ ಯಾವ ಸಂದೇಶ ನೀಡಲು ಬಯಸುತ್ತಾರೆ? : ಶಾಹನವಾಜ್ ಹುಸೈನ್ ಪ್ರಶ್ನೆ
ನವದೆಹಲಿ: ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದ ಬಳಿಕ ಭಾರತದಲ್ಲಿ ಹೊಸ ಚರ್ಚೆಗಳು ರಾಜಕೀಯ ಪಕ್ಷಗಳ ನಡುವೆ ತೀವ್ರವಾಗಿದ್ದು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿಕೆಗೆ ಬಿಜೆಪಿಯ ಹಿರಿಯ ನಾಯಕ ಶಾಹನವಾಜ್ ಹುಸೈನ್ ತಿರುಗೇಟು ನೀಡಿದ್ದು, ಹೇಳಿಕೆಗಳಿಂದ ಹಿಂದೂ ಮತ್ತು ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಬಯಸಲಾಗಿದೆ ಎಂದಿದ್ದಾರೆ.
”ಹಿಜಾಬ್ ಧರಿಸಿರುವ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ” ಎಂದು ಹೇಳಿದ್ದ ಓವೈಸಿ ಅವರಿಗೆ ತಿರುಗೇಟು ನೀಡಿ, ”ಓವೈಸಿಯಂತಹ ನಾಯಕರು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಎಂದು ಹೇಳುವ ಮೂಲಕ ಅವರು ಬಿಜೆಪಿಯನ್ನು ಗುರಿಯಾಗಿಸಿದ್ದಾರೆ. ಭಾರತವು ಅಲ್ಪಸಂಖ್ಯಾತರಿಗೆ ಸುರಕ್ಷಿತ ದೇಶವಾಗಿದೆ” ಎಂದಿದ್ದಾರೆಓವೈಸಿ ವಿಚಿತ್ರ ಹೇಳಿಕೆಗಳನ್ನು ನೀಡುವುದರಲ್ಲಿ ನಿಪುಣರು. ಇಂಗ್ಲೆಂಡಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಪ್ರಧಾನಿಯಾದರೆ ಅವರಿಗೆ ಸಂತೋಷವಿಲ್ಲ. ಭಾರತದಲ್ಲಿ ಫಕ್ರುದ್ದೀನ್ ಅಲಿ ಅಹ್ಮದ್, ಜಾಕಿರ್ ಹುಸೇನ್, ಎಪಿಜೆ ಅಬ್ದುಲ್ ಕಲಾಂ ಮತ್ತು ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿ ಹುದ್ದೆಗಳನ್ನು ಹೊಂದಿದ್ದರು. ಓವೈಸಿ ಮಾತನಾಡುತ್ತಿರುವ ರೀತಿಯ ಭಾಷೆ ದುರದೃಷ್ಟಕರ. ಇಂತಹ ಹೇಳಿಕೆ ನೀಡುವ ಮೂಲಕ ಅವರು ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ? ದೇಶದ ಜನರಿಂದ ಆಯ್ಕೆಯಾದ ವ್ಯಕ್ತಿ ಮಾತ್ರ ಪ್ರಧಾನಿಯಾಗುತ್ತಾರೆ'' ಎಂದು ಶಾಹನವಾಜ್ ಹುಸೈನ್ ಹೇಳಿದ್ದಾರೆ.