ಸರ್ಕಲ್ ಪಾಲಿಟಿಕ್ಸ್: ಜಮಖಂಡಿಯಲ್ಲಿ ನಿಷೇಧಾಜ್ಞೆ ಜಾರಿ
ಜಮಖಂಡಿ: ನಗರದಲ್ಲಿ ಅನಧಿಕೃತವಾಗಿ ವೃತ್ತಗಳನ್ನು ನಿರ್ಮಾಣ ಮಾಡಿರುವುದರಿಂದ ಶಾಂತಿ ಕಾಪಾಡುವ ದೃಷ್ಡಿಯಿಂದ ಶನಿವಾರ ಬೆಳಿಗ್ಗೆಯಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಗರದಲ್ಲಿ ಜನರು ಗುಂಪು, ಗುಂಪಾಗಿ ಸೇರುವಂತಿಲ್ಲ.
ಶಾಸಕ ಆನಂದ ನ್ಯಾಮಗೌಡರ ನೇತ್ರತ್ವದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ವೃತ್ತ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ವೃತ್ತ ನಿರ್ಮಾಣ ಮಾಡಲಾಯಿತು. ಇದನ್ನು ಖಂಡಿಸಿ ಬಿಜೆಪಿ ಮುಖಂಡರು ಆರು ವೃತ್ತಗಳನ್ನು ನಿರ್ಮಾಣ ಮಾಡಿದ್ದಾರೆ