ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ತಪ್ಪಿಸಲು ಬರಲಿದೆ ಹೊಸ ಪ್ಲಾನ್‌

ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ತಪ್ಪಿಸಲು ಬರಲಿದೆ ಹೊಸ ಪ್ಲಾನ್‌

ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಟ್ರಾಫಿಕ್‌ ಕಿರಿಕಿರಿಯ ಶಾಶ್ವತ ಪರಿಹಾರಕ್ಕಾಗಿ ಈಗ ಬಿಬಿಎಂಪಿ & ಟ್ರಾಫಿಕ್‌ ಪೊಲೀಸ್‌ ಇಲಾಖೆ ನಯಾ ಪ್ಲಾನ್‌‌ ರೂಪಿಸಿದೆ. 273 ಕೋಟಿ ವೆಚ್ಚದಲ್ಲಿ ಫ್ರೀ ಕಾರಿಡಾರ್‌‌ ರಸ್ತೆಗಳನ್ನು ನಿರ್ಮಿಸಲು ಸಜ್ಜಾಗಿದ್ದು, 3 ವರ್ಷದೊಳಗೆ ಈ ಯೋಜನೆ ಮುಗಿಸಲು ಸರ್ಕಾರ ಸೂಚನೆ ನೀಡಿದೆ. ಸಂಚಾರ ಪೊಲೀಸರು ಸಿದ್ದಪಡಿಸಿರುವ ವರದಿ ಪ್ರಕಾರ, ಮ್ಯಾನ್‌ಹೋಲ್‌‌‌ & ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ನಿಲ್ಲುವುದರಿಂದಲೂ ಟ್ರಾಫಿಕ್‌ ಸಮಸ್ಯೆ ಜಾಸ್ತಿಯಾಗಿದೆ ಎಂದಿದೆ.