10 ವರ್ಷ ಬಾಲಕನ ಹತ್ಯೆ ಪ್ರಕರಣ: ತಲೆಮರಿಸಿಕೊಂಡಿದ್ದ ಆರೋಪಿಗಳ ಬಂಧನ

10 ವರ್ಷ ಬಾಲಕನ ಹತ್ಯೆ ಪ್ರಕರಣ: ತಲೆಮರಿಸಿಕೊಂಡಿದ್ದ ಆರೋಪಿಗಳ ಬಂಧನ

ಬೆಂಗಳೂರು :ಬೆಂಗಳೂರಿನಲ್ಲಿ ಬಾಲಕನನ್ನ ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ಆರೋಪಿಗಳನ್ನು ಮೈಕೋಲೇಔಟ್ ಪೊಲೀಸರು ಬಂಧಿಸಿದ್ದಾರೆ. ಮಗುವನ್ನು ನೋಡಿಕೊಳ್ಳಲು ಕಷ್ಟವಾಗಿದ್ದ ತಾಯಿ ಮೈಕೊಲೇಔಟ್ ವ್ಯಾಪ್ತಿಯ ರೌಡಿಶೀಟರ್ ಸುನಿಲ್ ಬಳಿ ಬಿಟ್ಟಿದ್ದಳು. ಮಗು ನೋಡಿಕೊಳ್ಳುತ್ತೇನೆ ಎಂದಿದ್ದ ಸುನಿಲ್, ಬಾಲಕನಿಗೆ ಪ್ರತಿದಿನವೂ ದೈಹಿಕ ಹಿಂಸೆ ನೀಡುತ್ತಿದ್ದ. ಕೊಠಡಿಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದುದರಿಂದ ಬಾಲಕ ಪ್ರಾಣಬಿಟ್ಟಿದ್ದ.

ನಂತರ ತಮಿಳುನಾಡಿಗೆ ಬಾಲಕನ ಶವ ಸಾಗಿಸಿದ್ದ ಸುನಿಲ್ ಹಾಗೂ ಸಿಂಧು, ನಿರ್ಜನ ಪ್ರದೇಶದಲ್ಲಿ ಬಾಲಕನ ಮೃತದೇಹ ಎಸೆದಿದ್ದರು. ಮರಣೋತ್ತರ ಪರೀಕ್ಷೆ ಮಾಡಿಸಿದ್ದ ತಮಿಳುನಾಡು ಪೊಲೀಸರಿಗೆ ಬಾಲಕನ ಗುರುತು ಪತ್ತೆಯಾಗಿರಲಿಲ್ಲ. ಅವರು ಕೊಲೆ ಪ್ರಕರಣವನ್ನು ದಾಖಲಿಸಿದ್ದರು. 7 ತಿಂಗಳ ನಂತರ ಬಾಲಕನ ತಾಯಿ ಮೈಕೋಲೇಔಟ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಳು.

ಬಾಲಕ ಯಾವಾಗಿನಿಂದ ನಾಪತ್ತೆ ಎಂದು ಪೊಲೀಸರು ಪ್ರಶ್ನಿಸಿ ತನಿಖೆ ಕೈಗೊಂಡಾಗ ದೈಹಿಕ ಹಿಂಸೆ ನೀಡಿ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಕೊಲೆ ಪ್ರಕರಣ ದಾಖಲಿಸಿ ಮೈಕೊಲೇಔಟ್ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದ್ದು, ರೌಡಿಶೀಟರ್ ಸುನಿಲ್ ಹಾಗೂ ಸಿಂಧು ಅವರನ್ನು ಬಂಧಿಸಲಾಗಿದೆ.