ಆನ್​​ಲೈನ್​ ಲಂಚಾವತಾರ: ಕ್ಯಾಬ್​​ ಚಾಲಕನಿಂದ ಪೋನ್ ಪೇ ಮಾಡಿಸಿಕೊಂಡ ಪಿಎಸ್​​ಐ ಅಮಾನತು

ಆನ್​​ಲೈನ್​ ಲಂಚಾವತಾರ: ಕ್ಯಾಬ್​​ ಚಾಲಕನಿಂದ ಪೋನ್ ಪೇ ಮಾಡಿಸಿಕೊಂಡ ಪಿಎಸ್​​ಐ ಅಮಾನತು

ತುಮಕೂರು: ಕ್ಯಾಬ್ ಚಾಲಕನಿಂದ ಪೋನ್ ಪೇ ಮೂಲಕ ಲಂಚ ಪಡೆದ ಆರೋಪದ ಮೇಲೆ ಗುಬ್ಬಿ ಪಿಎಸ್‌ಐ ಜ್ಞಾನಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.

ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ತಡೆದು ಕಿರುಕುಳ ನೀಡಿ, ಚಾಲಕನಿಂದ 7 ಸಾವಿರ ಹಣವನ್ನು ಫೋನ್ ಪೇ ಮೂಲಕ ಪಡೆದಿದ್ದರು. ತಮ್ಮ ಜೀಪ್ ಚಾಲಕ ಕರಿಯಪ್ಪ ಅವರ ನಂಬರ್ ಗೆ ಫೋನ್ ಪೇ ಮಾಡಿಸಿಕೊಂಡದ್ದರು ಎಂಬ ಆರೋಪವನ್ನು ಪಿಎಸ್​​ಐ ಜ್ಞಾನಮೂರ್ತಿ ಎದುರಿಸುತ್ತಿದ್ದರು.

ಪಿಎಸ್‌ಐ ದೌರ್ಜನ್ಯ ಖಂಡಿಸಿ ಇತರೆ ಚಾಲಕರು ಪ್ರತಿಭಟನೆ ಕೂಡ ಮಾಡಿದ್ದರು. ಈ ಸಂಬಂಧ ಮಾಹಿತಿ ಪಡೆದ ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್, ಪಿಎಸ್​​ಐ ಜ್ಞಾನಮೂರ್ತಿ ಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.