BIG NEWS: ಗನ್ ಹಿಡಿದು ಫೋಟೋ ಶೂಟ್ ನಲ್ಲಿ ಭಾಗಿ: ಅತ್ಯಾಚಾರ ಪ್ರಕರಣದ ಗಂಭೀರತೆ ಮರೆತ ಗೃಹ ಸಚಿವ; ಮೈಸೂರಲ್ಲಿ ಟೈಂ ಪಾಸ್ ಓಡಾಟ
ಮೈಸೂರು : ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ನಡೆದು ಎರಡು ದಿನಗಳು ಕಳೆದರೂ ಈವರೆಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸದ ಗೃಹ ಸಚಿವ ಆರಗ ಜ್ಞಾನೇಂದ್ರ ಇದೀಗ ಗನ್ ಹಿಡಿದು ಫೋಟೋಗೆ ಪೋಸ್ ನೀಡಿ ಟೈಂ ಪಾಸ್ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅತ್ಯಾಚಾರ ಪ್ರಕರಣದ ಬಗ್ಗೆ ನಿನ್ನೆಯಷ್ಟೇ ಬೇಜವಾಬ್ದಾರಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಗೃಹ ಸಚಿವರು ಇಂದು ಕೂಡ ತಮ್ಮ ಉಡಾಫೆ ನಡೆ ಮುಂದುವರೆಸಿದ್ದು, ಪ್ರಕರಣದ ಗಂಭೀರತೆ ಮರೆತು ಪೊಲೀಸ್ ಅಕಾಡೆಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಇನ್ನೊಂದೆಡೆ ಗನ್ ಹಿಡಿದು ಫೋಟೋ ಶೂಟ್ ಮಾಡಿಸಿದ್ದಾರೆ. ಸಾಲದ್ದಕ್ಕೆ ಫೈರಿಂಗ್ ಪ್ರಾಕ್ಟೀಸ್ ಮಾಡಿದ್ದು ಹೊಸ ಅನುಭವ ಎಂದು ಸಂತಸ ಹಂಚಿಕೊಂಡಿದ್ದಾರೆ.
ಮೈಸೂರಿನಲ್ಲಿದ್ದರೂ ಗೃಹ ಸಚಿವರು ಈವರೆಗೂ ಗ್ಯಾಂಗ್ ರೇಪ್ ನಡೆದ ಘಟನಾ ಸ್ಥಳ ಪರಿಶೀಲನೆಯನ್ನೂ ನಡೆಸಿಲ್ಲ. ಪೊಲೀಸ್ ಅಧಿಕಾರಿಗಳ ಸಭೆಯನ್ನೂ ಮಾಡಿಲ್ಲ. ಪೊಲಿಸರಿಂದ ಆರೋಪಿಗಳ ಪತ್ತೆ ಕಾರ್ಯವೂ ನಡೆದಿಲ್ಲ. ಜಿಲ್ಲೆಯಲ್ಲಿ ಕೇವಲ ಟೈಂ ಪಾಸ್ ಓಡಾಟ ನಡೆಸಿದ್ದು, ಗೃಹ ಸಚಿವರಾದವರಿಗೆ ತಮ್ಮ ಹುದ್ದೆ ಜವಾಬ್ದಾರಿಯ ಅರಿವೂ ಇಲ್ಲದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.