Lalith Mahal Palace: ಶತಮಾನದ ಸಂಭ್ರಮದಲ್ಲಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್

Lalith Mahal Palace: ಶತಮಾನದ ಸಂಭ್ರಮದಲ್ಲಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್
ಸಾಂಸ್ಕೃತಿಕ ನಗರಿ ಅರಮನೆಗಳ ನಗರಿ(Palace City) ಹೆರಿಟೇಜ್ ಸಿಟಿ(Heritage) ಎಂದೆಲ್ಲ ಖ್ಯಾತಿ ಪಡೆದಿರುವ ಮೈಸೂರು ತನ್ನ ಒಡಲಿನಲ್ಲಿ ಇತಿಹಾಸದ ಹಲವಾರು ಮಹತ್ತರ ಕುರುಹುಗಳನ್ನು ಇಟ್ಟುಕೊಂಡಿದೆ.. ಮೈಸೂರು ಒಡೆಯರ್( Mysore Wodeyer) ಕುಟುಂಬದ ಇತಿಹಾಸವನ್ನು(History) ಸಾರುವ ಹತ್ತು ಹಲವು ಐತಿಹಾಸಿಕ ವಸ್ತುಗಳು ಮೈಸೂರಿನಲ್ಲಿವೆ..
ಮೈಸೂರು(Mysore) ಒಡೆಯರು ಕಟ್ಟಿಸಿದ ಭವ್ಯ ಅರಮನೆಗಳು ಮೈಸೂರಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಪ್ರವಾಸಿಗರು, ಇವುಗಳಿಗೆ ಮನಸೋಲುವಂತೆ ಮಾಡಿದೆ.. ಅಲ್ಲದೇ ಸಿನಿ ಪ್ರಿಯರ ನೆಚ್ಚಿನ ತಾಣವಾಗಿ ಲಲಿತ್ ಮಹಲ್ ಪ್ಯಾಲೇಸ್(Lalith mahal Palace) ಇದೆ.. ಇನ್ನು ಮೈಸೂರಿನ ಅಂಬಾವಿಲಾಸ ಅರಮನೆಯಷ್ಟೇ (Amba vilasa Palace) ಪ್ರಖ್ಯಾತಿ ಪಡೆದಿರುವ ಲಲಿತ್ ಮಹಲ್ ಮೈಸೂರಿನ ಎರಡನೇ ಅತಿದೊಡ್ಡ ಅರಮನೆ ಎಂದೇ ಖ್ಯಾತಿ ಪಡೆದಿದೆ. ವಿಶೇಷ ಅಂದ್ರೆ ಲಂಡನ್‌ನ(London) ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ ವಾಸ್ತುಶಿಲ್ಪದ ಸ್ಫೂರ್ತಿ ಪಡೆದು ಮೈಸೂರಿನ ಸೊಬಗನ್ನ ಸಾರುವ ಲಲಿತಮಹಲ್ ಅರಮನೆ ನಿರ್ಮಾಣವಾಗಿ 100 ವರ್ಷಗಳೇ(century) ಸಂದಿವೆ.

ಶತಮಾನ ಪೂರೈಸಿದ ಲಲಿತ್ ಮಹಲ್ ಪ್ಯಾಲೇಸ್

ಮೈಸೂರು ಮಹಾ ಸಂಸ್ಥಾನಕ್ಕೆ ಹತ್ತು ಹಲವು ಕೊಡುಗೆಗಳನ್ನು ನೀಡಿದ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಸುಮಾರು 40 ಎಕರೆ ಜಾಗದಲ್ಲಿ ನಿಖರವಾಗಿ 100 ವರ್ಷಗಳ ಹಿಂದೆ ಅಂದ್ರೆ ನ. 18, 1921 ರಂದು,
ಲಂಡನ್‌ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ ವಾಸ್ತುಶಿಲ್ಪದ ಮಾದರಿಯಲ್ಲಿಯೇ ಭವ್ಯವಾದ ಲಲಿತಮಹಲ್ ಅರಮನೆಯನ್ನ ನಿರ್ಮಿಸಿದ್ರು..

:ಮತ್ತೊಮ್ಮೆ ಮೈಸೂರಿನತ್ತ ಮುಖ ಮಾಡಿದ 'ರಾಕಿ ಭಾಯ್'

ಅಂದಿನ ರಾಜ ಅತಿಥಿಗೃಹ ಇಂದು ಹೋಟೆಲ್.

ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಲಲಿತ್ ಮಹಲ್ ಅರಮನೆಯನ್ನು ನಮ್ಮ ರಾಜ ಅತಿಥಿಗಳಿಗಾಗಿ ನಿರ್ಮಾಣ ಮಾಡಿದ್ರು.ಇದನ್ನು ಮೊದಲಿಗೆ ಮಹಾರಾಜರ ರಾಜ ಅತಿಥಿಗಳಾಗಿದ್ದ ಅಂದಿನ ವೈಸ್ ರಾಯ್‌ಗಳಿಗೆ ಅತಿಥಿ ಗೃಹವಾಗಿ ಕೇವಲ 13 ಲಕ್ಷಗಳಲ್ಲಿ ನಿರ್ಮಿಸಲಾಗಿತು. ನಂತರ ಈ ಅರಮನೆಯನ್ನು ಇತರ ರಾಜನ ಅತಿಥಿಗಳು ಮತ್ತು ರಾಜಮನೆತನದ ವಿಶೇಷ ಸಂದರ್ಶಕರಿಗೆ ಆತಿಥ್ಯ ವಹಿಸಲು ಬಳಸಲಾಯಿತು.ಈಗ ಅದೇ ರಾಜಾತಿಥ್ಯ ಗೃಹ ಭಾರತ ಸ್ವಾತಂತ್ರದ ನಂತರ ಕಾಲಾಂತರದಲ್ಲಿ ಅಂದ್ರೆ 1974ರಲ್ಲಿ ಪಾರಂಪರಿಕ ಹೋಟೆಲ್ ಆಗಿ ಮಾರ್ಪಾಡಾಗಿದೆ. ವಿದ್ಯಾ ಲಲಿತ್ ಮಹಲ್ ಅರಮನೆಯ ನಿರ್ವಹಣೆಯನ್ನು ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಲಲಿತ್ ಮಹಲ್ ಅರಮನೆಯನ್ನು ನಿರ್ವಹಣೆ ಮಾಡುತ್ತಿದೆ..

ವೈಭವದಿಂದಲೇ ಗಮನ ಸೆಳೆಯುವ ಲಲಿತ್ ಮಹಲ್ ಅರಮನೆ

ಲಂಡನ್‌ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಾಣವಾಗಿರುವ ಲಲಿತ್ ಮಹಲ್ ಪ್ಯಾಲೇಸ್ ನ್ನು ಡಬ್ಲ್ಯೂ. ಫ್ರಿಚ್ಲೆ ಎಂಬುವವರು ವಿನ್ಯಾಸಗೊಳಿಸಿದ್ದಾರೆ. ಹೊರಗಡೆಯಿಂದ ನೋಡಲು ಬಿಳಿ ಬಣ್ಣದಿಂದ ವೈಭವೋಪೇತವಾಗಿ ಕಾಣುವ ಲಲಿತ ಮಹಲ್ ಅರಮನೆ, ಒಳಾಂಗಣದಲ್ಲಿಯು ಅಷ್ಟೇ ಭವ್ಯವಾಗಿ ಇದೆ. ಗೋಳಾಕಾರದ ಗುಮ್ಮಟಗಳು, ಪ್ರವೇಶ ಮಂಟಪಕ್ಕಿಂತ ಮೇಲಿರುವ ಕೇಂದ್ರ ಗುಮ್ಮಟ ಪ್ರಧಾನವಾಗಿ ದೊಡ್ಡದಾಗಿದೆ.

ಅರಮನೆಯ ಪ್ರವೇಶ ದ್ವಾರವು ಬಹಳ ಮೆಚ್ಚುಗೆಗೆ ಪಾತ್ರವಾಗಿದ್ದು, ಸುಂದರವಾಗಿ ಅಲಂಕೃತಗೊಂಡಿದೆ. ಪ್ರವೇಶ ದ್ವಾರವನ್ನು ಗಾರ್ಡ್ ಹೌಸ್ ಎಂದೂ ಕರೆಯಲಾಗುತ್ತದೆ. ಇದರೊಂದಿಗೆ ಲಲಿತಾ ಮಹಲ್‌ನ ಗೋಡೆಗಳು ಮತ್ತು ಛಾವಣಿಗಳನ್ನು ಸೊಗಸಾಗಿ ಕಟ್ಟಲಾಗಿದೆ. ಅರಮನೆಯ ಒಳಾಂಗಣದಲ್ಲಿರುವ ಬೆಲ್ಜಿಯಂನ ಸ್ಫಟಿಕ ಗೊಂಚಲುಗಳು, ಪರ್ಷಿಯನ್ ರತ್ನಗಂಬಳಿಗಳು, ಕತ್ತರಿಸಿದಂತಿರುವ ಗಾಜಿನ ದೀಪಗಳು, ಅಮೃತಶಿಲೆಯ ಮಹಡಿಗಳು ಜೊತೆಗೆ ಕೆತ್ತನೆಗಳು ಅರಮನೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ..

:ಸಾಂಸ್ಕೃತಿಕ ನಗರ ಮೈಸೂರು ಪ್ರಗತಿಯಾಗ್ತಿಲ್ವ? ಅಭಿವೃದ್ಧಿಗೆ ಆಗುತ್ತಿರುವ ಸಮಸ್ಯೆ ಏನು?

ಇನ್ನು 2018 ರಿಂದ, ಲಲಿತ್ ಮಹಲ್ ಅರಮನೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಘಟಕವಾದ ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳು ನಿರ್ವಹಿಸುತ್ತಿವೆ. ಮುಖ್ಯ ಹೆರಿಟೇಜ್ ಹೋಟೆಲ್‌ನಲ್ಲಿ ಹೆರಿಟೇಜ್ ಸೂಟ್‌ಗಳು ಸೇರಿದಂತೆ 22 ಕೊಠಡಿಗಳಿವೆ - ವೈಸ್‌ರಾಯ್ ಸೂಟ್, ವೈಸರೀನ್ ಸೂಟ್, ಡ್ಯುಪ್ಲೆಕ್ಸ್ ಸೂಟ್, ಹೆರಿಟೇಜ್ ಸೂಟ್ ಮತ್ತು ಟಾರೆಟ್ ರೂಮ್‌ಗಳು ಮತ್ತು 32 ಕೊಠಡಿಗಳನ್ನು ಅನೆಕ್ಸ್ ಕಟ್ಟಡದಲ್ಲಿ ಸೇರಿಸಲಾಗಿದೆ.

ಮೈಸೂರು ಸಂಸ್ಥಾನದ ಇತಿಹಾಸ ಸಾರುವ ಲಲಿತ್ ಮಹಲ್ ಪ್ಯಾಲೇಸ್

ಮೈಸೂರು ಮಹಾಸಂಸ್ಥಾನದ ಆಡಳಿತ, ಹಾಗೂ ಮೈಸೂರು ಮಹಾರಾಜರನ್ನು ನೆನಪಿಸುವ ಹತ್ತು ಹಲವು ಮಾಹಿತಿಗಳು ಲಲಿತ್ ಮಹಲ್ ಅರಮನೆಯ ಒಳಾಂಗಣದಲ್ಲಿ ಇವೆ.. ಬಹುಮುಖ್ಯವಾಗಿ ಕೃಷ್ಣರಾಜ ಒಡೆಯರ್ IV ಸೇರಿದಂತೆ ಮೈಸೂರು ಸಂಸ್ಥಾನದ ಅನೇಕ ರಾಜರು ಹಾಗೂ, ಮೈಸೂರು ದೊರೆಯಾಗಿದ್ದ ಟಿಪ್ಪು ಸುಲ್ತಾನ್ ಮತ್ತು ಅವರ ಕುಟುಂಬದ ಜೀವನವನ್ನು ಚಿತ್ರಿಸುವ ಅಪರೂಪದ ಕಲಾಕೃತಿಗಳನ್ನು ಅರಮನೆಯ ಲಾಬಿ ಮತ್ತು ನೆರೆಯ ಗೋಡೆಗಳಲ್ಲಿ ನೇತುಹಾಕಲಾಗಿದೆ..

ಸಿನಿಮಾ ತಂಡಗಳ ನೆಚ್ಚಿನ ತಾಣ ಲಲಿತ್ ಮಹಲ್

ಪಾಶ್ಚಿಮಾತ್ಯ ಶೈಲಿ ಹಾಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಲಲಿತಮಹಲ್ ಅರಮನೆ ಅಂದ್ರೆ ಪ್ರವಾಸಿಗರಿಗೆ ಮಾತ್ರವಲ್ಲ ಸಿನಿಪ್ರಿಯರಿಗೆ ಅಚ್ಚುಮೆಚ್ಚು.. ಕನ್ನಡ, ಹಿಂದಿ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಗಳು ಲಲಿತ್ ಮಹಲ್ ಅರಮನೆಯಲ್ಲಿ ಸಿನಿಮಾ ಶೂಟಿಂಗ್ ಕೂಡಾ ಮಾಡಿದೆ.. 1985ರಲ್ಲಿ ತಯಾರಾದ ಅಮಿತಾಬಚ್ಚನ್ ನಟನೆಯ ಮರ್ದ್, ಸಡಕ್, ತಲೈವಾ ರಜನಿಕಾಂತ್ ನಟನೆಯ ಲಿಂಗಾ, ಪ್ರಭಾಸ್ ನಟನೆಯ ಅಡವಿ ರಾಮುಡು, ಯಶ್ ನಟಿಸಿದ್ದ ಕೆಜಿಎಫ್ ಸೇರಿ ನೂರಾರು ಚಿತ್ರಗಳು ಲಲಿತ್ ಮಹಲ್ ಅರಮನೆಯಲ್ಲಿ ಚಿತ್ರೀಕರಣಗೊಂಡಿದೆ..