ಮೈಸೂರು ಅತ್ಯಾಚಾರ ಪ್ರಕರಣ: ಮಕ್ಕಳನ್ನು ಎನ್‌ಕೌಂಟರ್ ಮಾಡಬೇಡಿ ಎಂದ ಆರೋಪಿಗಳ ಪೋಷಕರು

ಮೈಸೂರು ಅತ್ಯಾಚಾರ ಪ್ರಕರಣ: ಮಕ್ಕಳನ್ನು ಎನ್‌ಕೌಂಟರ್ ಮಾಡಬೇಡಿ ಎಂದ ಆರೋಪಿಗಳ ಪೋಷಕರು

ಮೈಸೂರು : ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳ ಪೋಷಕರು ತಮ್ಮ ಮಕ್ಕಳನ್ನು ಎನ್‌ಕೌಂಟರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಕೃತ್ಯ ನಡೆದ ದಿನ ತೊಟ್ಟಿದ್ದ ಬಟ್ಟೆ ಹಾಗೂ ಹಲ್ಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಕಲೆ ಹಾಕಲು ಪೊಲೀಸರು ಆರೋಪಿಗಳ ಮನೆಗೆ ತೆರಳಿದಾಗ ಪೋಷಕರು ಕಣ್ಣೀರಿಟ್ಟಿದ್ದಾರೆ.

ಕರ್ನಾಟಕ ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್ ಮಾಡುತ್ತಾರೆ ಎನ್ನುವ ಸುದ್ದಿ ಪೋಷಕರಿದ್ದ ಪ್ರದೇಶದಲ್ಲಿ ಹಬ್ಬಿದ್ದು, ಪೋಷಕರು ಕಣ್ಣೀರಿಡುತ್ತಾ ನಮ್ಮ ಮಕ್ಕಳನ್ನು ಎನ್‌ಕೌಂಟರ್ ಮಾಡಬೇಡಿ ಎಂದಿದ್ದಾರೆ.