ತೀವ್ರ ಚಳಿಯಿಂದ ಮೆದುಳಿನ ಪಾರ್ಶ್ವವಾಯು ಅಪಾಯ ಹೆಚ್ಚು: ಆರೋಗ್ಯ ತಜ್ಞರ ಎಚ್ಚರಿಕೆ
ನವದೆಲಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮುಂದುವರೆದ ಕೊರೆಯುವ ಚಳಿಗೆ ಮೆದುಳಿನ ಪಾರ್ಶ್ವವಾಯು ಮತ್ತು ಮೆದುಳಿನ ರಕ್ತಸ್ರಾವದ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳಾಗುತ್ತಿವೆ.
ಇದರ ಬೆನ್ನಲ್ಲೇ, ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ನರವಿಜ್ಞಾನಿ ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ನರವಿಜ್ಞಾನಿ ಅವರು ಚಳಿಗಾಲದಲ್ಲಿ ಅಧಿಕ ರಕ್ತದೊತ್ತ ಮತ್ತು ಕೆಲವೊಮ್ಮೆ ಬ್ರೈನ್ ಸ್ಟ್ರೋಕ್ಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
'ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಲ್ಲಿ ಮೆದುಳಿನ ಸ್ಟ್ರೋಕ್ ಅಪಾಯವು ಹೆಚ್ಚಾಗುತ್ತದೆ. ನಾವು ತೀವ್ರ ಶೀತ ಗಾಳಿ ಇರುವ ಪರ್ವತಗಳಿಗೆ ಹೋದರೆ, ಬ್ರೈನ್ ಸ್ಟ್ರೋಕ್ ಅಪಾಯ ಎದುರಾಗುತ್ತೆ. ಸೂರ್ಯನ ಶಾಖ ಕಡಿಮೆಯಿದ್ದರೆ ಅದು ಮೆದುಳಿನ ಸ್ಟ್ರೋಕ್ ಅಪಾಯವನ್ನು ಉಂಟುಮಾಡಬಹುದು. ಆದ್ದರಿಂದ, ತಾಪಮಾನವು ಅತ್ಯಂತ ಕಡಿಮೆ ಇರುವ ಸ್ಥಳಗಳಲ್ಲಿ ಹೆಚ್ಚುವರಿ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ' ಎಂದು ಡಾ ಸಿಎಸ್ ಅಗರ್ವಾಲ್ ಹೇಳಿದರು.
ಅಧಿಕ ರಕ್ತದೊತ್ತಡ ಇರುವವರಲ್ಲಿ ಬ್ರೈನ್ ಸ್ಟ್ರೋಕ್ ಮತ್ತು ಮೆದುಳಿನ ರಕ್ತಸ್ರಾವದ ಅಪಾಯ ಇನ್ನೂ ಹೆಚ್ಚಾಗಿರುತ್ತದೆ ಎಂದು ಹಿರಿಯ ನರರೋಗ ತಜ್ಞರು ತಿಳಿಸಿದ್ದಾರೆ. ತೀವ್ರವಾದ ಶೀತ ವಾತಾವರಣದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮತ್ತು ವೈದ್ಯರೊಂದಿಗೆ ಸಕಾಲಿಕ ಸಮಾಲೋಚನೆ ನಡೆಸುವುದು ಅಗತ್ಯವಾಗಿದೆ. ಚಳಿ ವಾತಾವರಣದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರೊಂದಿಗೆ ಚಳಿಗಾಲದಲ್ಲಿ ಬೆವರುವಿಕೆಯ ಕೊರತೆಯಿಂದಾಗಿ, ದೇಹದಲ್ಲಿ ಸೋಡಿಯಂ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ' ಎಂದು ಅವರು ಹೇಳಿದರು