ಹನುಮಗಿರಿ ಭೇಟಿಯನ್ನು ಟ್ವೀಟರ್‌ನಲ್ಲಿ ಹಂಚಿಕೊಂಡ ಶಾ; ಸಮೃದ್ಧಿಗಾಗಿ ಪ್ರಾರ್ಥನೆ

ಹನುಮಗಿರಿ ಭೇಟಿಯನ್ನು ಟ್ವೀಟರ್‌ನಲ್ಲಿ ಹಂಚಿಕೊಂಡ ಶಾ; ಸಮೃದ್ಧಿಗಾಗಿ ಪ್ರಾರ್ಥನೆ

ಪುತ್ತೂರು: ಈಶ್ವರಮಂಗಲದ ಅಮರಗಿರಿಯ ಶ್ರೀ ಭಾರತೀ ಅಮರಜ್ಯೋತಿ ಮಂದಿರಕ್ಕೆ ನೀಡಿದ ಭೇಟಿ ನೀಡಿದಾಗಿನ ಅನುಭವವನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ದೇವಾಲಯವು ಮಾತೃ ಭೂಮಿಯ ಭದ್ರತೆ ಮತ್ತು ಸಮೃದ್ಧಿಗಾಗಿ ಜೀವನವನ್ನು ಮುಡಿಪಾಗಿಟ್ಟ ದೇಶಭಕ್ತರಿಗೆ ಸಮರ್ಪಿತವಾಗಿದೆ.

ಇದು ಹೊಸ ಪೀಳಿಗೆಗೆ ದೇಶಕ್ಕಾಗಿ ಬದುಕಲು ಸ್ಫೂರ್ತಿ ನೀಡುತ್ತದೆ ಎಂದು ಅಮರಗಿರಿಯ ಬಗ್ಗೆ ಟ್ವೀಟ್‌ ಮಾಡಿರುವ ಅವರು ಹನುಮಗಿರಿ ಪಂಚಮುಖಿ ಆಂಜನೇಯ ದೇವಾಲಯದ ಭೇಟಿಯ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಕ್ಯಾಂಪ್ಕೋ ಸಂಸ್ಥೆಯ ಬಗ್ಗೆ ಉಲ್ಲೇಖೀಸುತ್ತ, 50 ವರ್ಷಗಳ ಹಿಂದೆ ಬಹುರಾಜ್ಯ ಸಹಕಾರಿ ಸಂಘ ಕ್ಯಾಂಪ್ಕೋ ಸ್ಥಾಪನೆಯಿಂದಾಗಿ ಸಣ್ಣ ರೈತರಲ್ಲಿ ಭರವಸೆಯ ಆಶಾಕಿರಣ ಮೂಡಿತು. ಇದು ಇಂದು 2778 ಕೋಟಿ ವಹಿವಾಟಿನ ಜತೆಗೆ 'ಸಹಕಾರದಿಂದ ಸಮೃದ್ಧಿ' ಎಂಬ ಧ್ಯೇಯಕ್ಕೆ ಆದರ್ಶಪ್ರಾಯವಾಗಿ ನಿಂತಿದೆ ಎಂದು ಪ್ರಶಂಸಿಸಿದ್ದಾರೆ.