ಲೋಕಸಭೆಯಲ್ಲಿ ಗಲಾಟೆ, ಕಲಾಪ ಮುಂದಕ್ಕೆ

ಲೋಕಸಭೆಯಲ್ಲಿ ಗಲಾಟೆ, ಕಲಾಪ ಮುಂದಕ್ಕೆ

ನವದೆಹಲಿ,ಡಿ.17- ಉತ್ತರ ಪ್ರದೇಶ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ಸಂಬಂಧ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಭಾರಿ ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯ ಕಲಾಪಗಳನ್ನು ಮಧ್ಯಾಹ್ನ ಎರಡು ಗಂಟೆವರೆಗೆ ಮುಂದೂಡಬೇಕಾಯಿತು.

ಲಖೀಂಪುರ ಖೇರಿ ಪ್ರಕರಣದಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಆರೋಪಿಯಾಗಿರುವುದರಿಂದ ಸಚಿವರನ್ನು ವಜಾಗೊಳಿಸಬೇಕು ಎಂದು ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದಿದ್ದರಿಂದ ಸಂಸತ್ತಿನ ಕೆಳಮನೆಯ ಪ್ರಶ್ನೋತ್ತರ ವೇಳೆಗೆ ಸತತ ಮೂರನೇ ದಿನವೂ ಅಡ್ಡಿಯಾಯಿತು.
ಉತ್ತರ ಪ್ರದೇಶ ಲಖೀಂಪುರ ಖೇರಿಯಲ್ಲಿ ಅಕ್ಟೋಬರ್‍ನಲ್ಲಿ ನಡೆದ ಹಿಂಸಾಚಾರಕ್ಕೆ ನಾಲ್ವರು ರೈತರೂ ಸೇರಿದಂತೆ ಎಂಟು ಮಂದಿ ಬಲಿಯಾದರು.

# ರಾಜ್ಯಸಭೆಯೂ ಮುಂದಕ್ಕೆ:
ರಾಜ್ಯಸಭೆಯಲ್ಲಿ ಇಂದು ಬೆಳಗ್ಗೆ ಕೆಲವು ದಾಖಲೆಗಳ ಮಂಡನೆ ಆದ ಕೂಡಲೇ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸಂಸದರ ಅಮಾನತು ಪ್ರಕರಣದ ವಿವಾದ ಇತ್ಯರ್ಥಕ್ಕೆ ಸರ್ಕಾರ ಮತ್ತು ಪ್ರತಿಪಕ್ಷಗಳು ಸಹಮತಕ್ಕೆ ಬರಬೇಕೆಂದು ಆಗ್ರಹಿಸಿ ಸದನದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.