ಸತತ 3 ದಿನಗಳ ಕಾರ್ಯಾಚರಣೆ ನಂತರ ಕಡಬದಲ್ಲಿ ಕಾಡಾನೆ ಕೊನೆಗೂ ಸೆರೆ; ನಿಟ್ಟುಸಿರುಬಿಟ್ಟ ಜನರು

ಸತತ 3 ದಿನಗಳ ಕಾರ್ಯಾಚರಣೆ ನಂತರ ಕಡಬದಲ್ಲಿ ಕಾಡಾನೆ ಕೊನೆಗೂ ಸೆರೆ; ನಿಟ್ಟುಸಿರುಬಿಟ್ಟ ಜನರು

ಕ್ಷಿಣಕನ್ನಡ : ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಹಲವು ದಿನಗಳಿಂದ ನಿದ್ದೆಗೆಡೆಸಿದ್ದ ಕಾಡಾನೆ ಕೊನೆಗೂ ಅರಣ್ಯಾ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಫೆ.20 ಬೆಳಗ್ಗೆ ಕಾಡಾನೆಯ ದಾಳಿಯಲ್ಲಿ ರೆಂಜಿಲಾಡಿಯ ನೈಲ ನಿವಾಸಿಗಳಾದ ರಂಜಿತಾ ರೈ ಮತ್ತು ಅವರ ರಕ್ಷಣೆಗೆ ಧಾವಿಸಿದ ರಮೇಶ್ ರೈ ಎಂಬವರನ್ನು ಕೊಂದಿತ್ತು. ವರಿಬ್ಬರ ಮೃತದೇಹ ತೆಗೆಯುವ ಮುಂಚೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಡಿಎಫ್‌ಒ ಸ್ಥಳಕ್ಕೆ ಬರುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.

ಇವರು ಸ್ಥಳಕ್ಕೆ ಬಂದಾಗ ಕಾಡಾನೆಯನ್ನು ಸೆರೆ ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದರು.ಹೀಗಾಗಿ ಕಾಡಾನೆ ಸೆರೆ ಹಿಡಿಯುವುದಕ್ಕಾಗಿಆನೆ ಕ್ಯಾಂಪ್‌ ನಿಂದ 5 ಆನೆಗಳನ್ನು ತರಲಾಗಿತ್ತು.‌ ಕಾರ್ಯ ಆರಂಭವಾಗಿತ್ತು. ಆದ್ರೂ ಕೂಡು ಕಾಡಾನೆ ಸೆರೆಯಾಗಿರಲಿಲ್ಲ. ಕಳೆದ ಎರಡು ದಿನಗಳಲ್ಲಿ ವಿಫಲವಾದ ಕಾರ್ಯಾಚರಣೆ ಕೊನೆಗೂ ಮೂರನೇಯ ದಿನ ಯಶಸ್ಸು ಕಂಡಿದೆ.ರೆಂಜಿಲಾಡಿಯ ತುಂಬೆ ರಕ್ಷಿತಾರಣ್ಯದಲ್ಲಿ ಬಂದಿಳಿದ ಸಾಕಾನೆಗಳು ಮತ್ತು ತಜ್ಞ ವೈದ್ಯರ ತಂಡ ನೂಜಿಬಾಳ್ತಿಲ ಸಮೀಪದ ಪುತ್ಯೆ ಎಂಬಲ್ಲಿಂದ ಕಾರ್ಯಾಚರಣೆ ಆರಂಭಿಸಿತು.