ಅಕ್ರಮ ಸಂಬಂಧದ ಅನುಮಾನಕ್ಕೆ ಪತ್ನಿ ಹಾಗೂ 6 ತಿಂಗಳ ಮಗುವನ್ನು ಸ್ಕ್ರೂ ಡ್ರೈವರ್​ನಿಂದ ಮುಗಿಸಿದ ತಂದೆ!

ಅಕ್ರಮ ಸಂಬಂಧದ ಅನುಮಾನಕ್ಕೆ ಪತ್ನಿ ಹಾಗೂ 6 ತಿಂಗಳ ಮಗುವನ್ನು ಸ್ಕ್ರೂ ಡ್ರೈವರ್​ನಿಂದ ಮುಗಿಸಿದ ತಂದೆ!

ವದೆಹಲಿ: ಅಕ್ರಮ ಸಂಬಂಧದ ಶಂಕೆಯ ಮೇರೆಗೆ ಪತ್ನಿಯನ್ನು ಇರಿದು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ವಾಯುವ್ಯ ದೆಹಲಿಯ ಶಕುರ್‌ಪುರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.

ಆರೋಪಿ ಬ್ರಿಜೇಶ್ ಶುಕ್ರವಾರ ರಾತ್ರಿ ತನ್ನ ಪತ್ನಿ ಅಂಜಲಿ (24) ಮತ್ತು ಆರು ತಿಂಗಳ ಮಗನನ್ನು ಚಾಕು ಮತ್ತು ಸ್ಕ್ರೂಡ್ರೈವರ್‌ನಿಂದ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಎಸಗಿದ ನಂತರ ಪೊಲೀಸರಿಗೆ ಕರೆ ಮಾಡಿದ ಬ್ರಿಜೇಶ್ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿವೆ. (ಏಜೆನ್ಸೀಸ್)