ಐಪಿಎಲ್ ಮಿನಿ ಹರಾಜು: ಆರ್ಸಿಬಿಗೆ ಸ್ಟಾರ್ ಆಟಗಾರರ ಖರೀದಿ ಕಷ್ಟ; ಕಾರಣ ಏನು?

ಐಪಿಎಲ್ 16ರ ಆವೃತ್ತಿಯ ಹರಾಜಿಗಾಗಿ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ಕೊಚ್ಚಿಯಲ್ಲಿ ನಡೆಯಲಿರುವ ಮಿನಿ ಹರಾಜಿನ ಮೂಲಕ 10 ತಂಡಗಳು ಬಲಿಷ್ಠ ಬಳಗವನ್ನು ರೂಪಿಸುವ ಇರಾದೆಯಲ್ಲಿದೆ. ಆದರೆ ಆರ್ಸಿಬಿ ಫ್ರಾಂಚೈಸಿಯು ಕಡಿಮೆ ಮೊತ್ತದೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸ್ಟಾರ್ ಆಟಗಾರರ ಖರೀದಿಗೆ ಕಷ್ಟ. ಆರ್ಸಿಬಿ ಬಳಿ ಉಳಿದಿರುವುದು ಕೇವಲ 8.75 ಕೋಟಿ ರೂ. ಮಾತ್ರ. ಈ ಮೊತ್ತದೊಳಗೆ ಆರ್ಸಿಬಿ ತಂಡವು 7 ಆಟಗಾರರನ್ನು ಖರೀದಿಸಬೇಕಾಗುತ್ತದೆ.