ಷ್ನಾಯ್ಡರ್ ಎಲೆಕ್ಟ್ರಿಕ್; ಬೆಂಗಳೂರಿನಲ್ಲಿ ಸ್ಮಾರ್ಟ್ ಫ್ಯಾಕ್ಟರಿ

ಬೆಂಗಳೂರಿನಲ್ಲಿ 425 ಕೋಟಿ ರೂ. ಹೂಡಿಕೆ ಮಾಡಿ ಸ್ಮಾರ್ಟ್ ಫ್ಯಾಕ್ಟರಿ ಆರಂಭಿಸಲು ಉದ್ದೇಶಿಸಿರುವುದಾಗಿ ಫ್ರಾನ್ಸ್ ಮೂಲದ ಷ್ನಾಯ್ಡರ್ ಎಲೆಕ್ಟ್ರಿಕ್ ಕಂಪನಿಯ ಭಾರತ ಘಟಕ ತಿಳಿಸಿದೆ. ಹೊಸ ಸ್ಮಾರ್ಟ್ ಫ್ಯಾಕ್ಟರಿಯು ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ 10 ಘಟಕಗಳ ಪೈಕಿ 6 ಅನ್ನು ಒಂದೇ ಸೂರಿನಡಿ ತರಲಿದೆ. ಈಗಿರುವ 5 ಲಕ್ಷ ಚದರ ಅಡಿಯ ಫ್ಯಾಕ್ಟರಿಯ ಬದಲಿಗೆ 10 ಲಕ್ಷ ಚದರ ಅಡಿಯಲ್ಲಿ ಹೊಸ ಸ್ಮಾರ್ಟ್ ಫ್ಯಾಕ್ಟರಿ ನಿರ್ಮಾಣವಾಗಲಿದೆ. ಫ್ಯಾಕ್ಟರಿಯಿಂದ 1,000 ಉದ್ಯೋಗ ಸೃಷ್ಟಿಯಾಗಲಿದೆ.