ಹಿಜಾಬ್,ಸುಪ್ರೀಂ ತೀರ್ಪು ಹೆಣ್ಣುಮಕ್ಕಳ ಹಕ್ಕಿಗೆ ರಕ್ಷಣೆ

ಉಡುಪಿ, ಅ. ೧೪- ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಂತ್ರಸ್ತ ಹೆಣ್ಣುಮಕ್ಕಳ ಹಕ್ಕುಗಳನ್ನು ಎತ್ತಿಹಿಡಿದಂತಾಗಿದೆ ಎಂದು ಹಿಜಾಬ್ ಹೋರಾಟಗಾರ್ತಿ ಅಲಿಯೊ ಅಸಾದಿರವರು ಟ್ವೀಟ್ ಮಾಡಿದ್ದಾರೆ.
ಹಿಜಾಬ್ ಬಗ್ಗೆ ನ್ಯಾಯಮೂರ್ತಿ ಸುಧಾಂಶು ದುಲಿಯಾ ನೀಡಿರುವ ತೀರ್ಪು ನ್ಯಾಯದ ಬಗ್ಗೆ ಭರವಸೆಯನ್ನು ಬಲಪಡಿಸಿದೆ. ನ್ಯಾಯಕ್ಕೆ ಜಯವಾಗಿ ತೀರ್ಪು ಬರಬಹುದೆಂಬ ವಿಶ್ವಾಸ ಮೂಡಿಸಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಹಿಜಾಬ್ ವಿವಾದ ಕುರಿತಂತೆ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹಾಗೂ ನ್ಯಾಯಮೂರ್ತಿ ದುಲಿಯಾರವರು ವಿಭಿನ್ನ ತೀರ್ಪು ನೀಡಿದ್ದರು. ನ್ಯಾ. ದುಲಿಯಾರವರು ಸ್ವಾತಂತ್ರ್ಯ ಹಾಗೂ ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆಯಾಗಬಾರದೆಂದು ತೀರ್ಪು ನೀಡುವ ಮೂಲಕ ಹಿಜಾಬ್ ಧರಿಸುವುದನ್ನು ಸಮರ್ಥಿಸಿಕೊಂಡಿದ್ದರು.ನ್ಯಾ. ದುಲಿಯಾ ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ಸಾಂವಿಧಾನಿಕ ಮೌಲ್ಯ ಮುಂದುವರೆದಿದೆ ಎಂದು ಅನಿಸುತ್ತಿದೆ ಎಂದು ಅಸಾದಿ ಹೇಳಿದ್ದಾರೆ.ಹಿಜಾಬ್ ಬಗ್ಗೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸಾವಿರಾರು ವಿದ್ಯಾರ್ಥಿಗಳು ಭರವಸೆಯಿಂದ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.