PSI' ಅಕ್ರಮ ನೇಮಕಾತಿ ಹಗರಣ : ಸಿಐಡಿಯಿಂದ 4 ನೇ ಬಾರಿ 'ಅಮೃತ್ ಪೌಲ್' ವಿಚಾರಣೆ

PSI' ಅಕ್ರಮ ನೇಮಕಾತಿ ಹಗರಣ : ಸಿಐಡಿಯಿಂದ 4 ನೇ ಬಾರಿ 'ಅಮೃತ್ ಪೌಲ್' ವಿಚಾರಣೆ

ಬೆಂಗಳೂರು: 545 ಪೊಲೀಸ್ ಸಬ್ ಇನ್ಸ್ ಪೆಕ್ಟ್ ನೇಮಕಾತಿ ಪರೀಕ್ಷೆಯ ಅಕ್ರಮ ( PSI Recruitment Scam ) ಸಂಬಂಧ, ಇತ್ತೀಚೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿತ ಆರೋಪಿ ಅಮೃತ್ ಪೌಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು.

ಇದೀಗ ಮತ್ತೆ ಅಮೃತ್ ಪೌಲ್ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಇಂದು ಬುಧವಾರ ಸಿಐಡಿ ಪೊಲೀಸರು ಅಮೃತ್ ಪೌಲ್ರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಸಿಐಡಿ 4ನೇ ಬಾರಿಗೆ ಅವರ ವಿಚಾರಣೆಯನ್ನು ನಡೆಸುತ್ತಿದೆ. ಪಿಎಸ್‌ಐ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಅಮೃತ್ ಪೌಲ್ ಕೆಲಸ ಮಾಡಿದ್ದರು.

ಇತ್ತೀಚೆಗೆ ಆರೋಪಿ ಎಡಿಜಿಪಿ ಅಮೃತ್ ಪೌಲ್ ಹಾಗೂ ಶಾಂತಕುಮಾರ್ ಸೇರಿದಂತೆ ಹಲವರ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ( ED Officer Raid ) ನಡೆಸಿದ್ದರು. ಸಹಕಾರ ನಗರದಲ್ಲಿರುವಂತ ಎಡಿಜಿಪಿ ಅಮೃತ್ ಪೌಲ್ ಅವರ ನಿವಾಸದಲ್ಲಿ ಇಡಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಸಿದ್ದರು.