ಪಂಚರತ್ನ ಯಾತ್ರೆ ಬದಲು ನವಗ್ರಹ ಯಾತ್ರೆ ಅಂತ ಹೆಸರಿಡಬೇಕಿತ್ತು : ಜೆಡಿಎಸ್ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

ಬೆಂಗಳೂರು : ಜೆಡಿಎಸ್ ನವರು ಪಂಚರತ್ನ ಯಾತ್ರೆ ಬದಲು ನವಗ್ರಹ ಯಾತ್ರೆ ಅಂತಾ ಹೆಸರಿಡಬೇಕಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನವರು ಪಂಚರತ್ನ ಯಾತ್ರೆ ಹೊರಟಿದ್ದಾರೆ.
ದೇವೇಗೌಡರ ಕುಟುಂಬದಲ್ಲೇ ಬಡಿದಾಟ ನಡೆಯುತ್ತಿದೆ. ಕೊನೆಗೆ ಹೈಕಮಾಂಡ್ ತೀರ್ಮಾನ ಮಾಡ್ತಾರೆ ಅಂತಾ ಹೇಳಿದ್ದಾರೆ. ಜೆಡಿಎಸ್ ಹೈಕಮಾಂಡ್ ಅವರ ಕಿಚನ್ ನಲ್ಲಿದೆ. ಇರುವ 5 ಜಿಲ್ಲೆಗಳಲ್ಲಿ ಹೆಚ್ ಡಿಡಿ ಕುಟುಂಬದವರೇ ಇದ್ದಾರೆ. ಇವರು ರಾಜ್ಯ ಉದ್ಧಾರ ಮಾಡ್ತಾರಾ? ಎಂದು ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.