ಏಷ್ಯಾ ಕಪ್ ಪಂದ್ಯದ ಭವಿಷ್ಯ ಬಿಸಿಸಿಐ ನಿರ್ಧರಿಸಲಿದೆ ; ರೋಹಿತ್

ನವದೆಹಲಿ,ಅ.22- ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ತಂಡ ಭಾಗವಹಿಸುವ ಬಗ್ಗೆ ಬಿಸಿಸಿಐ ನಿರ್ಧರಿಸಲಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ.
ಸಧ್ಯ ನಾವು ಟಿ-20 ವಿಶ್ವಕಪ್ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದೇವೆ. ನಮಗೆ ಮೊದಲು ಕಪ್ ಗೆಲ್ಲುವುದು ಮುಖ್ಯ ಇತರ ಪಂದ್ಯಗಳ ಬಗ್ಗೆ ಬಿಸಿಸಿಐ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. 2023ರಲ್ಲಿ ಪಾಕ್‍ನಲ್ಲಿ ನಡೆಯಲಿರುವ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಭಾಗವಹಿಸುತ್ತಿಲ್ಲ. ಒಂದು ವೇಳೆ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆದರೆ ಭಾಗವಹಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ನೀಡಿರುವ ಹೇಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ರೋಹಿತ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನನ್ನ ಟೇಕ್ ಕೇವಲ ವಿಶ್ವಕಪ್ ಮೇಲೆ ಕೇಂದ್ರೀಕೃತವಾಗಿದೆ ಏಕೆಂದರೆ ಇದು ನಮಗೆ ತುಂಬಾ ಮುಖ್ಯವಾಗಿದೆ. ನಂತರ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಅದರ ಬಗ್ಗೆ ಯೋಚಿಸುವುದರಲ್ಲಿ ಅರ್ಥವಿಲ್ಲ. ಬಿಸಿಸಿಐ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನಾಳಿನ ಪಂದ್ಯಕ್ಕೆ ನಾವು ಹೇಗೆ ಸಿದ್ಧರಾಗಬೇಕು ಎಂಬುದರ ಮೇಲೆ ನಾವು ಗಮನಹರಿಸಿದ್ದೇವೆ ಎಂದು ರೋಹಿತ್ ಶರ್ಮಾ ಟಿ 20 ವಿಶ್ವಕಪ್ 2022 ರ ಆರಂಭಿಕ ಪಂದ್ಯದ ಮೊದಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.