ಹಾಕಿ ವಿಶ್ವಕಪ್ 2023: ಫೈನಲ್ ಪಂದ್ಯಕ್ಕೆ ಬೆಲ್ಜಿಯಂ ಮತ್ತು ಜರ್ಮನಿ ಸೆಣಸಾಟ

ಹಾಕಿ ವಿಶ್ವಕಪ್ 2023: ಫೈನಲ್ ಪಂದ್ಯಕ್ಕೆ ಬೆಲ್ಜಿಯಂ ಮತ್ತು ಜರ್ಮನಿ ಸೆಣಸಾಟ

ವದೆಹಲಿ: ಒಡಿಶಾದಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ ವಿಶ್ವಕಪ್ 2023 ರ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ ಜರ್ಮನಿಯನ್ನು ಎದುರಿಸಲಿದೆ.

ಪ್ರಶಸ್ತಿಗಾಗಿ ಜನವರಿ 29ರ ಭಾನುವಾರ ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಉಭಯ ತಂಡಗಳು ಸೆಣಸಾಡಲಿದೆ.

ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ ಬೆಲ್ಜಿಯಂ ಪೆನಾಲ್ಟಿ ಶೂಟೌಟ್ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿದರೆ, ಜರ್ಮನಿ 4-3 ಗೋಲುಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿತು. ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಬೆಲ್ಜಿಯಂ ಮತ್ತು ಜರ್ಮನಿ ಕಠಿಣ ಸ್ಪರ್ಧೆಯನ್ನು ಎದುರಿಸುವ ನಿರೀಕ್ಷೆಯಿದೆ.