ಐದು ಗಂಡು ಮರಿಗಳಿಗೆ ಜನ್ಮವಿಟ್ಟ ಮೇಕೆ. .

ಐದು ಗಂಡು ಮರಿಗಳಿಗೆ ಜನ್ಮವಿಟ್ಟ ಮೇಕೆ. .

ಕಲಬುರಗಿ: ಸಾಮಾನ್ಯವಾಗಿ ಮೇಕೆಗಳು ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಮೇಕೆಯೊಂದು ಐದು ಗಂಡು ಮರಿಗಳಿಗೆ ಜನ್ಮ ನೀಡಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾ| ಚಿನಮಳ್ಳಿ ಗ್ರಾಮದಲ್ಲಿ ಇಂತಹದೊಂದು ಅಚ್ಚರಿಯ ಘಟನೆ ನಡೆದಿದೆ. ಗ್ರಾಮದ ಬಸಮ್ಮ ಅನ್ನೋರಿಗೆ ಸೇರಿದ್ದ ಮೇಕೆ, ನಿನ್ನೆ ಮುಂಜಾನೆ ಐದು ಮರಿಗಳಿಗೆ ಜನ್ಮ ನೀಡಿದೆ. ಇದನ್ನು ನೋಡಿದ ಗ್ರಾಮದ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.