ಭಾರತದಲ್ಲಿ ಫಿಫಾ ವಿಶ್ವಕಪ್‌: ಪ್ರಧಾನಿ ಮೋದಿ ವಿಶ್ವಾಸ

ಭಾರತದಲ್ಲಿ ಫಿಫಾ ವಿಶ್ವಕಪ್‌: ಪ್ರಧಾನಿ ಮೋದಿ ವಿಶ್ವಾಸ

ವಾಸ್ತವವಾಗಿ ಭಾರತವು ಇನ್ನೂ ಒಂದೇ ಒಂದು ಫಿಫಾ ವಿಶ್ವಕಪ್ ಪಂದ್ಯವನ್ನು ಆಡಿಲ್ಲ, ಆಯೋಜಿಸಿಲ್ಲ. ಆದರೆ ಮುಂದೊಂದು ದಿನ ಭಾರತವು ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತದೆ & ಭಾಗವಹಿಸುತ್ತದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿಲ್ಲಾಂಗ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭವಿಷ್ಯದಲ್ಲಿ ಭಾರತದಲ್ಲಿ ನಾವು ಫಿಫಾ ವಿಶ್ವಕಪ್‌ ಆಚರಿಸುವ & ತ್ರಿವರ್ಣ ಧ್ವಜಕ್ಕೆ ಮೆರಗು ನೀಡುವ ದಿನ ದೂರವಿಲ್ಲ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ' ಎಂದಿದ್ದಾರೆ.