ಫಸ್ಟ್ ಡೇ ಗಳಿಕೆಯಲ್ಲಿ ಚಿರಂಜೀವಿ ಚಿತ್ರವನ್ನೇ ಓವರ್‌ ಟೇಕ್‌ ಮಾಡಿದ ನಾನಿ

ಫಸ್ಟ್ ಡೇ ಗಳಿಕೆಯಲ್ಲಿ ಚಿರಂಜೀವಿ ಚಿತ್ರವನ್ನೇ ಓವರ್‌ ಟೇಕ್‌ ಮಾಡಿದ ನಾನಿ

ನೆನ್ನೆ ರಿಲೀಸ್‌ ಆಗಿರುವ ಎಲ್ಲ ಚಿತ್ರಗಳು ಉತ್ತಮ ಆರಂಭವನ್ನೇ ಪಡೆದುಕೊಂಡಿವೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ತೆರೆ ಕಂಡ ಚಿತ್ರಗಳು ಹೆಚ್ಚುಗಳಿಕೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಆದರೆ ಈ ನಾನಿ ನಟನೆಯ ದಸರಾ ಚಿತ್ರವು ಸಖತ್‌ ಸೌಂಡ್‌ ಮಾಡಿ ಫಸ್ಟ್‌ ದಿನವೇ ಭರ್ಜರಿ ಗಳಿಕೆಯನ್ನು ಮಾಡಿದೆ.

ನಟರಾಕ್ಷಸನ ಹೊಯ್ಸಳ ಚಿತ್ರ ಭರ್ಜರಿ ಓಪನಿಂಗ್‌ ಕಂಡರೇ, ದಸರಾ ಸಹ ಬ್ಲಾಕ್‌ಬಸ್ಟರ್‌ ಓಪನಿಂಗ್‌ ಪಡೆದುಕೊಂಡಿದೆ. ನಾನಿ ನಟನೆಯ ಕೆಲವು ಸಿನಿಮಾಗಳು ಅಷ್ಟಾಗಿ ಯಶಸ್ಸು ಗಳಿಸಿರಲಿಲ್ಲ. ಹಾಗಾಗಿ ದಸರಾ ಚಿತ್ರವು ಮೊದಲಿಗೆ ಸಾಧಾರಣ ಬುಕಿಂಗ್‌ ಪಡೆದುಕೊಂಡಿತ್ತು.

ಆದರೆ ಅದೇ ಚಿತ್ರ ಮೊದಲು ಪ್ರದರ್ಶನ ಕಂಡು ಅಭಿಮಾನಿಗಳು ಚಿತ್ರವನ್ನು ಮೆಚ್ಚಿಕೊಂಡಿದ್ದೇ, ಸಂಜೆ ಹಾಗೂ ರಾತ್ರಿಯ ಸಿನಿಮಾ ಪ್ರದರ್ಶನಗಳು ಹೌಸ್‌ಫುಲ್‌ ಆದವು. ಪರಿಣಾಮ ಚಿತ್ರ ಮೊದಲ ದಿನ ವಿಶ್ವದಾದ್ಯಂತ 38.65 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿತು. ನಾನಿ ಕೊನೆ ಚಿತ್ರ ಅಂಟೆ ಸುಂದರಾನಿಕಿ ಮಾಡಿದ್ದ ಒಟ್ಟು ಕಲೆಕ್ಷನ್ ಅನ್ನು ಈ ಚಿತ್ರ ಮೊದಲ ದಿನವೇ ಮಾಡಿಬಿಟ್ಟಿದೆ. ಇದು ನಾನಿ ಕೆರಿಯರ್‌ನಲ್ಲೇ ಅತಿದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಎಂದು ಹೇಳಲಾಗುತ್ತಿದೆ.

ಹೀಗೆ ನಾನಿ ನಟನೆಯ ದಸರಾ ಚಿತ್ರವು ಕರ್ನಾಟಕದಲ್ಲಿ ಬಿಡುಗಡೆಯಾಗಿರುವ ಉಳಿದ ಚಿತ್ರಗಳನ್ನು ಹಿಮ್ಮಟ್ಟಿದೆ. ಹಾಗಿದ್ದರೆ, ದಸರಾ ಮೊದಲ ದಿನ ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಹಾಗೂ ಮೊದಲ ದಿನಕ್ಕಿಂತ ಎರಡನೇ ದಿನ ಬೆಂಗಳೂರಿನಲ್ಲಿ ಎಷ್ಟು ಹೆಚ್ಚು ಶೋಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ..

*ದಸರಾ ಮೊದಲ ದಿನ ಕರ್ನಾಟಕದಲ್ಲಿ 2.70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.
*ಇದು ನಾನಿ ಸಿನಿ ಜೀವನಲ್ಲಿಯೇ ಕರ್ನಾಟಕದಲ್ಲಿ ದಾಖಲಾದ ದೊಡ್ಡ ಓಪನಿಂಗ್ ಎನಿಸಿಕೊಂಡಿದೆ.
*ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ 2.34 ಕೋಟಿ ಕಲೆಕ್ಷನ್ ಮಾಡಿತ್ತು.
*ಈ ಮೂಲಕ 2.7 ಕೋಟಿ ಕಲೆಕ್ಷನ್ ಮಾಡಿರುವ ದಸರಾ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರವನ್ನೇ ಹಿಂದಿಕ್ಕಿ ಅಬ್ಬರಿಸಿದೆ.
*ದಸರಾ ಇಂದು 331 ಪ್ರದರ್ಶನಗಳನ್ನು ಪಡೆದುಕೊಂಡಿದೆ.