ರಾಜ್ಯದಲ್ಲಿ ಶಾಲೆ-ಕಾಲೇಜು ಬಂದ್ ಮಾಡುವ ಕುರಿತಂತೆ ಶಿಕ್ಷಣ ಸಚಿವರು ಹೇಳಿದ್ದೇನು ಗೊತ್ತಾ?
ರಾಜ್ಯದ ಶಾಲಾ, ಕಾಲೇಜುಗಳಲ್ಲಿ ಕೊರೊನಾ ವೈರಸ್ ಗಂಭೀರವಾಗಿಲ್ಲ. ಪೋಷಕರು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ, ಸದ್ಯಕ್ಕೆ ಶಾಲೆ-ಕಾಲೇಜು ಬಂದ್ ಮಾಡುವ ನಿರ್ಧಾರ ಇಲ್ಲ. ಶಾಲೆ ಮುಚ್ಚುವ ನಿರ್ಧಾರ ಶಿಕ್ಷಣ ಇಲಾಖೆಯ ಮುಂದಿಲ್ಲ. ಕೊರೊನಾ ಹೆಚ್ಚಾದರೆ ಸರ್ಕಾರದ ಸಲಹೆ ಪಡೆದು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಶಾಲೆ-ಕಾಲೇಜುಗಳಲ್ಲಿ ಸೋಂಕು ಗಂಭೀರವಾಗಿ ಹರಡಿಲ್ಲ ಎಂದು ಹೇಳಿದ್ದಾರೆ.