ಅಜ್ಜನ ಸ್ಕೂಟರ್ ಹತ್ತಿದ ಯಶ್ ಮಕ್ಕಳು; ರಾಧಿಕಾ ಸ್ಪೆಷಲ್ ಪೋಸ್ಟ್

ರಾಧಿಕಾ ಪಂಡಿತ್ ಅವರು ಅಪ್ಪನ ಹಳೆಯ ಸ್ಕೂಟರ್ನಲ್ಲಿ ಮಕ್ಕಳನ್ನು ಹತ್ತಿಸಿ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. 'ನನ್ನ ಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್. ಅವರು ಡ್ರೈವ್ ಮಾಡುವಾಗ ನಾನು ನಿಜಕ್ಕೂ ನಿದ್ರಿಸಬಹುದು. ನನ್ನ ಪೂರ್ತಿ ಜೀವನದಲ್ಲಿ ಶಾಲೆ & ಕಾಲೇಜ್ ಲೈಫ್ನಲ್ಲಿ ಅಪ್ಪ ನನ್ನನ್ನು ಪಿಕಪ್-ಡ್ರಾಪ್ ಮಾಡುತ್ತಿದ್ದರು' ಎಂದು ನೆನಪಿಸಿಕೊಂಡಿದ್ದಾರೆ. ಸ್ಕೂಟರ್ ನಲ್ಲಿ ಕ್ಯೂಟ್ ಸ್ಮೈಲ್ ಕೊಟ್ಟು ಐರಾ ಮುಂದೆ ನಿಂತಿದ್ದರೆ ರಾಧಿಕಾ ಮಗನನ್ನು ಹಿಡಿದುಕೊಂಡು ಹಿಂದೆ ಕುಳಿತಿದ್ದರು.