66 ನೇ ಕನ್ನಡ ರಾಜ್ಯೋತ್ಸವ ಕೊಪ್ಪಳದಲ್ಲಿ ಸಂಭ್ರಮದಿಂದ ಆಚರಿಸಲಾಯಿತು

66 ನೇ ಕನ್ನಡ ರಾಜ್ಯೋತ್ಸವ ಕೊಪ್ಪಳದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಲಪ್ಪ ಆಚಾರ್ ಧ್ವಜಾರೋಹಣ ನೆರವೆರಿಸಿದ್ರು.ಪೋಲಿಸ್, ಗೃಹ ರಕ್ಷಕದಳ,ಎನ್ ಸಿ ಸಿ,ಸ್ಕೌಟ್ಸ್ ಆಂಡ್ ಗೈಡ್ಸ ಸೇರಿದಂತೆ ವಿವಿದ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ,ಸೇರಿದಂತೆ ಅಧಿಕಾರಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.