ಬುದ್ಧಿ ಮಾತು ಹೇಳಿದ್ದಕ್ಕೆ ಆತ್ಯಹತ್ಯೆಗೆ ಶರಣಾದ ಮಗ

ಮೂಡುಬಿದಿರೆ: ತಾಯಿ ಬುದ್ಧಿ ಮಾತು ಹೇಳಿದಕ್ಕೆ ಸಿಟ್ಟಾದ ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತಿಗೆ ಗ್ರಾಮದ ಕೊಡ್ಯಡ್ಕದಲ್ಲಿ ಗುರುವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕ ಸುಮಂತ್ ಹೆಗ್ಡೆ(15) ಎಂದು ತಿಳಿದುಬಂದಿದೆ. ಕಲ್ಲಬೆಟ್ಡು ಖಾಸಗಿ ಹೈಸ್ಕೂಲ್ ನ ಹತ್ತನೆ ತರಗತಿಯ ವಿದ್ಯಾರ್ಥಿ.
ಗುರುವಾರ ಮಧ್ಯಾಹ್ನ ಶಾಲೆಗೆ ಪರೀಕ್ಷೆಯ ಉತ್ತರ ಪತ್ರಿಕೆ ಕೊಟ್ಟು ಮನೆಗೆ ಬಂದಿದ್ದ. ಸಮಾಜ ವಿಜ್ಝಾನ ಉತ್ತರ ಪತ್ರಿಕೆ ಬಗ್ಗೆ ತಾಯಿ ಮಗನನ್ನು ಪ್ರಶ್ನಿಸಿ ಬುದ್ದಿ ಮಾತು ಹೇಳಿದ್ದರೆನ್ನಲಾಗಿದೆ ಇದರಿಂದ ಸಿಟ್ಟಾದ ಆತ ಕೋಣೆಗೆ ಹೋಗಿ ಬಾಗಿಲು ಭದ್ರಪಡಿಸಿ ಫ್ಯಾನಿಗೆ ಶಾಲು ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆ ಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.