ತೋಟದ ಮನೆಯಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪಲಾಯಿಲ ಸ್ನೇಕ್ ಅಶೋಕ್ ರಿಂದ ರಕ್ಷಣೆ..

ದಕ್ಷಿಣ ಕನ್ನಡ ಜಿಲ್ಲೆ ತೋಟದ ಮನೆಯಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ ಲಾಯಿಲ ಸ್ನೇಕ್ ಅಶೋಕ್ ರಿಂದ ರಕ್ಷಣೆ.. ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅತ್ಯಾರಂಡ ನಿವಾಸಿ ಜೋಸೆಫ್ ಬರ್ಬೋಜ ಎಂಬುವವರ ಮನೆಯ ತೋಟದಲ್ಲಿ ಹುಲ್ಲು ಕೊಯ್ಯುವಾಗ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ತಕ್ಷಣ ಮನೆಯವರು ಲಾಯಿಲ ಸ್ನೇಕ್ ಅಶೋಕ್ ಎಂಬುವವರಿಗೆ ಕರೆ ಮಾಡಿ ಕರೆಸಿ ಸುರಕ್ಷಿತವಾಗಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.