ಕೋವಿಡ್ ನಿಂದ ಮೃತಪಟ್ಟ 115 ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ 1ಲಕ್ಷ
ಬಿ.ಎ ಬಸವರಾಜ್. ಪ್ಯಾಕೇಜ್ ...
ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಅತಿಹೆಚ್ಚು ಸಾವು ನೋವುಗಳನ್ನು ಕಂಡಿದ್ದು ಭಾರತ ಅದರಲ್ಲಿ ಕರ್ನಾಟಕದಲ್ಲಂತೂ ಕರೋನಗೆ ಅದೆಷ್ಟೋ ಅಮಾಯಕರು ಬಲಿಯಾಗಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥವಾದರು. ಅನಾಥ ಮಕ್ಕಳಿಗೆ ಹಾಗೂ ಕುಟುಂಬಗಳಿಗೆ ಬೆನ್ನೆಲುಬಾಗಿ ನಿಂತ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮೃತ ಕುಟುಂಬಕ್ಕೆ ತಲಾ 1ಲಕ್ಷ ರೂ. ನೀಡುವ ಸಾರ್ಥಕತೆ ಮೆರೆದಿದ್ದಾರೆ
ಕೆ ಆರ್ ಪುರದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ಒಂದು ಲಕ್ಷ ನೀಡುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ , ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ,ಗೃಹಸಚಿವ ಬಸವರಾಜ ಬೊಮ್ಮಾಯಿ,ಸಚಿವರಾದ ಆರ್.ಅಶೋಕ್,ಅರವಿಂದ ಲಿಂಬಾವಳಿ,ಸೋಮಶೇಖರ್, ದೀಪಾರಾಧನೆ ಮೂಲಕ ಚಾಲನೆ ನೀಡಿದರು . ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಬೈರತಿ ಬಸವರಾಜ್ ಅವರು ಕೊವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳುವ ಮೂಲಕ ಆರ್ಥಿಕ ಸಹಾಯ ಮಾಡುತ್ತಿರುವ ಕಾರ್ಯ ಶ್ಲಾಘನೀಯ , ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊವಿಡ್ ನಿರ್ವಹಣೆಯನ್ನು ಸರ್ಮಪಕವಾಗಿ ಎದುರಿಸಿದೆ. ಎಲ್ಲರಿಗೂ ವ್ಯಾಕ್ಸಿನ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ . ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ವ್ಯಾಕ್ಸಿನೇಷನ್ ನೀಡಲಾಗುವುದು. ಪ್ರತಿಯೊಬ್ಬರು ವ್ಯಾಕ್ಸಿನೇಷನ್ ಪಡೆಯಬೇಕು ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಕಿವಿಮಾತು ಹೇಳಿದರು. ದುಡಿಯುವ ಕೈಗಳಿಗೆ ಕೆಲಸವಿಲ್ಲದ ಸಂದರ್ಭದಲ್ಲಿ ಒಂದು ಲಕ್ಷ ಕಿಟ್ ವಿತರಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದ ಬೈರತಿ ಬಸವರಾಜ್ ಅವರು ಪ್ರತಿ ಹಂತದಲ್ಲಿ ಸಾರ್ವಜನಿಕ ಸೇವೆ ನಿಂತಿರುವವುದು ಮೆಚ್ಚುವ ವಿಚಾರ.. ಒಟ್ಟಾರೆ ...
ಒಟ್ಟಾರೆ ಕರೋನಾ ಸಂದರ್ಭದಲ್ಲಿ ದುಡ್ಡು ಮಾಡುವವರ ಮಧ್ಯೆ ಸ್ವ ಇಚ್ಛೆಯಿಂದ 1ಕೋಟಿ ಹದಿನೈದು ಲಕ್ಷ ನೀಡುವ ಮೂಲಕ 100ಕ್ಕೂ ಹೆಚ್ಚು ಕುಟುಂಬಗಳಿಗೆ ಆಸರೆಯಾಗಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಇವರ ಈ ಕಾರ್ಯ ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ
Arunkumar - Banglore Reporter