ಪುನೀತ್ ರಾಜಕುಮಾರ್ ನಾಮಫಲಕ ಉದ್ಘಾಟನೆ
ದಿನದಿಂದ ದಿನಕ್ಕೆ ದಿವಂಗತ ಪವರ್ ಸ್ಟಾರ್ ಪುನೀತ್ ಕುಮಾರ್ ಮೇಲಿನ ಅಭಿಮಾನ ಹೆಚ್ಚಾಗುತ್ತಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿನೋಬನಗರದಲ್ಲಿ ಅಪ್ಪುವಿನ ನೆನಪಿಗಾಗಿ ಪುನೀತ್ ರಾಜಕುಮಾರ್ ನಾಮಫಲಕ ಉದ್ಘಾಟಿಸಿ ಇಡೀ ಗ್ರಾಮಕ್ಕೆ ಅನ್ನಸಂತರ್ಪಣೆ ಮಾಡಲಾಯಿತು. ಇದೇ ವೇಳೆ ಗ್ರಾಮಸ್ಥರು ಪುನೀತ್ಗೆ ನಮನ ಸಲ್ಲಿಸಿ ಕಂಬನಿ ಮೀಡಿದರು.