ರಿಯಲ್ ಎಸ್ಟೇಟ್ ಮತ್ತು ಇಂಟಿರೀಯರ್ ಎಕ್ಸಪೋ ಉದ್ಘಾಟಿಸಿದ ಶಾಸಕ ಅರವಿಂದ ಬೆಲ್ಲದ

ರಿಯಲ್ ಎಸ್ಟೇಟ್ ಮತ್ತು ಇಂಟಿರೀಯರ್ ಎಕ್ಸಪೋ ಉದ್ಘಾಟಿಸಿದ ಶಾಸಕ ಅರವಿಂದ ಬೆಲ್ಲದ

ಹುಬ್ಬಳ್ಳಿ  : ವಿಜಯವಾಣಿ ದಿನಪತ್ರಿಕೆ ಹಾಗೂ  ದಿಗ್ವಿಜಯ ನ್ಯೂಸ್ ಸುದ್ದಿವಾಹಿನಿ ಆಯೋಜಿಸಿರುವ ೩ ದಿನಗಳ ರಿಯಲ್ ಎಸ್ಟೇಟ್ ಮತ್ತು ಇಂಟಿರೀಯರ್ ಎಕ್ಸಪೋ-೨೦೨೨ ಗೆ ನಗರದ ರಾಯ್ಕರ್ ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. 
ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸಿ, ದೇಶದ ಜಿಡಿಪಿ ಶೇ. ೮.೨ ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ. ಇದೇ ವೇಳೆ ದೇಶದಾದ್ಯಂತ ರಿಯಲ್ ಎಸ್ಟೇಟ್ ಉದ್ಯಮ ಪ್ರಗತಿ ಕಾಣುತ್ತಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗದದಲ್ಲು ರಿಯಲ್ ಎಸ್ಟೇಟ್ ಉದ್ಯಮ ಉತ್ತಮ ಬೆಳವಣಿಗೆ ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ವಿಜಯವಾಣಿ ದಿನ‌ಪತ್ರಿಕೆ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಪ್ರಾಪರ್ಟಿ ಎಕ್ಸಪೋ ಆಯೋಜಿಸಿರುವುದು ಒಳ್ಳೆಯ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ, ಕ್ರೆಡೈ ನಿಯೋಜಿತ ಅಧ್ಯಕ್ಷ ಪ್ರದೀಪ ರಾಯ್ಕರ, ಸ್ವರ್ಣ ಗ್ರುಪ್ ಆಫ್ ಕಂಪನೀಸ್ ನ ಎಂಡಿ ಡಾ. ವಿ.ಎಸ್.ವಿ.‌ಪ್ರಸಾದ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಕಾಂಗ್ರೆಸ್ ಮುಖಂಡರ ನಾಗರಾಜ‌ಗೌರಿ, ಪ್ರಸಿದ್ಧ ಬಿಲ್ಡರ್ ಗಳಾದ ಸುರೇಶ ಶೇಜವಾಡಕರ, ಪ್ರಕಾಶ ಜೋಶಿ, ವಿರೇಶ ಉಂಡಿ, ಸೂರಜ್ ಅಳವಂಡಿ, ಇತರರು ಭಾಗವಹಿಸಿದ್ದರು.
ಎಕ್ಸಪೋದಲ್ಲಿ ೪೦ ಕ್ಕೂ ಹೆಚ್ಚು ಬಿಲ್ಡರ್,  ಡೆವಲಪರ್ಸ್ ೨೦೦ ಕ್ಕೂ ಹೆಚ್ಚು ಪ್ರೊಜೆಕ್ಟಗಳೊಂದಿಗೆ ಪಾಲ್ಗೊಂಡಿದ್ದಾರೆ.
ಮನೆ, ನಿವೇಶನ, ಪ್ಲಾಟ್, ಅಪಾರ್ಟಮೆಂಟ್, ಫಾರ್ಮ ಹೌಸ್ ಹೀಗೆ ತಮಗೆ ಬೇಕಾದ ಬಜೆಟ್ ಗೆ ಹೊಂದುವಂತೆ ಗ್ರಾಹಕರು ಎಕ್ಸಪೋದಲ್ಲಿ ಖರೀದಿ ಮಾಡಬಹುದಾಗಿದೆ. ಏ. ೨೪ ರವರೆಗೆ ಎಕ್ಸಪೋ ನಡೆಯಲಿದೆ. ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿದೆ.