ಹುಬ್ಬಳ್ಳಿಯಲ್ಲಿ 82.75 ಲಕ್ಷ ರೂ ಹಣ ಜಪ್ತಿ: ಹವಾಲ ಹಣವೇ?
ಹುಬ್ಬಳ್ಳಿಯಲ್ಲಿ 82.75 ಲಕ್ಷ ರೂ ಹಣ ಜಪ್ತಿ: ಹವಾಲ ಹಣವೇ?
ಕೇಶ್ವಾಪುರ ಪೊಲೀಸರ ಭರ್ಜರಿ ಬೇಟೆ
ಹುಬ್ಬಳ್ಳಿ: ಸ್ವಿಪ್ಟ್ ಡಿಜೈರ್ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 82.75 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡ ಕೇಶ್ವಾಪುರ ಠಾಣೆ ಪೊಲೀಸರು ನಿನ್ನೆ ರಾತ್ರಿ ಭರ್ಜರಿ ಬೇಟೆಯಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊ0ದಿಗೆ ಇಲ್ಲಿನ ಕುಸುಗಲ್ ರಸ್ತೆಯ ಆಕ್ಸಫರ್ಡ್ ಕಾಲೇಜ್ ಬಳಿ ಬಾಗಲಕೋಟೆಯಿಂದ ನಗರಕ್ಕೆ ಬರುತ್ತಿದ್ದ ಸ್ವಿಪ್ಟ್ ಡಿಜೈರ್(ಕೆಎ 36, ಎನ್ 2055)ನ್ನು ತಡೆದು ಪರಿಶೀಲಿಸಿದಾಗ ಹಣ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.
ಮೂಲತಃ ರಾಜಸ್ಥಾನ ಮೂಲದವನಾದ ಹಾಲಿ ಬಾಗಲಕೋಟ ಭವಾನಿ ಟೀ ಸ್ಟಾಲ್ ಟಾಂಗಾ ಸ್ಟಾö್ಯಂಡ್ ಹತ್ತಿರದ ನಿವಾಸಿ ಕಾರು ಚಾಲಕ ಗೋಕುಲರಾಮ ವೀರಾಮಾರಾಮ ರಬಾರಿ(34) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಚಾಲಕನಿAದ 82,75,100 ರೂ. ನಗದು, 5 ಲಕ್ಷ ರೂ. ಕಿಮ್ಮತ್ತಿನ ಒಂದು ಸ್ವಿಪ್ಟ್ ಡಿಜೈರ್ ಕಾರು ಹಾಗೂ ಎರಡು ಆಂಡ್ರೆöÊಡ್ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಇದು ಮಹಾನಗರ ಪಾಲಿಕೆ ಚುನಾವಣೆಗಾಗಿ ಸಾಗಿಸುತ್ತಿದ್ದ ಹಣವೋ ಅಥವಾ ಹವಾಲಾ ಹಣವೋ ಎಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ.