ಸವಿತಾ ಅಮರಶೆಟ್ಟಿ | Dharwad |

ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾಗಿ ಬಿಜೆಪಿ ಯುವ ರಾಜಕಾರಣಿ ಬಡವರ ಬಂಧು ಶ್ರೀಮತಿ ಸವಿತಾ ವಿಶ್ವನಾಥ ಅಮರಶೆಟ್ಟಿ ಅವರು ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಯಶಸ್ವಿಯಾಗಿ ಒಂದು ವರ್ಷ ತಮ್ಮ ಅಧಿಕಾರದ ಅವಧಿ ಪೂರೈಸಿದ್ದಾರೆ. ಉತ್ತರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ನಡುವೆ ರೇಷ್ಮೆ ಬಾಂಧವ್ಯಕ್ಕೆ ಮರು ಜೀವ ನೀಡುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಕರ್ನಾಟಕ ರೇಷ್ಮೆ ಮಾರುಕಟ್ಟೆ ಹಾಗೂ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಇವರ ಕಾರ್ಯವೈಖರಿ ಹಾಗೂ ರೈತ ಪರ ಕಾಳಜಿಗೆ ಮೆಚ್ಚಿ ಸಚಿವ ನಾರಾಯಣ ಗೌಡ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಕೇಂದ್ರ ನಾಯಕರು ಇವರಿಗೆ ಶಭಾಷಗಿರಿ ನೀಡಿದ್ದಾರೆ.