ಹಿಂದುತ್ವದ ಪರ ಬಂಟರ ಸಮುದಾಯ ಸಚಿವ ಮುನೇನಕೊಪ್ಪ

ಹಿಂದುತ್ವದ ಪರ ಬಂಟರ ಸಮುದಾಯ ಸಚಿವ ಮುನೇನಕೊಪ್ಪ

ಧಾರವಾಡ :ಹಿಂದುತ್ವದ ಪರ ಹೋರಾಟದಲ್ಲಿ ಮೊದಲಿನಿಂದಲೂ  ಧ್ವನಿ ಗೂಡಿಸುತ್ತ ಬಂದಿರುವ ಭಂಟ ಸಮುದಾಯದ ನಾಡಿಗೆ ಕೊಡುಗೆ ಅಪಾರ ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಶ್ಲಾಘಿಸಿದರು. 

ನಗರದ ಆರ್. ಏನ್. ಶೆಟ್ಟಿ ಸಭಾಭವನದಲ್ಲಿ ಹುಬ್ಬಳ್ಳಿ ಧಾರವಾಡ ಭಂಟರ ಸಂಘದ ವಾರ್ಷಿಕ ಸ್ನೇಹ ಕೂಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು 
ಭಂಟ ಸಮುದಾಯದ ಜನ ಶ್ರಮಜೀವಿಗಳು. ದೇಶದ ಯಾವುದೇ ಪ್ರದೇಶಕ್ಕೆ ಸೀಮಿತವಾಗದೆ ಎಲ್ಲ ಪ್ರದೇಶಗಳಲ್ಲಿ ಯಶಸ್ವಿಯಾಗಿ ಉದ್ಯಮ ಮಾಡಿ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ.ಬಸವಣ್ಣರ ಕಾಯಕವೇ ಕೈಲಾಸ ಎಂಬ ಸಿದ್ಧಾಂತವನ್ನು ಅಚ್ಚುಕಟ್ಟಾಗಿ ಭಂಟರು ಅಳವಡಿಸಿಕೊಂಡಿದ್ದಾರೆ ಎಂದು  

ಇನ್ನು ಕೋವಿಡ್ ನಿಂದಾಗಿ  ಕಳೆದ ಎರಡು ವರ್ಷಗಳಿಂದ ಸಂಘದ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ನಡೆದಿರಲಿಲ್ಲ. ಮತ್ತೆ ಇದಕ್ಕೆ ಚಾಲನೆ ಸಿಕ್ಕಿದೆ. ಯುವ ಪ್ರತಿಭೆಗಳಿಗೆ ಕ್ರೀಡಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಇದೇ ಸಂದರ್ಭದಲ್ಲಿ ಭಂಟರ ಧ್ವನಿ ಮುದ್ರಣ ಬಿಡುಗಡೆ ಮಾಡಲಾಯಿತು. 
ಸಮಾರಂಭದಲ್ಲಿ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ವೀರೇಂದ್ರ ಶೆಟ್ಟಿ, ಎಜಿಎಸ್ ಗ್ರೂಪ್ ನ ರವಿ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.