ಆರ್ ಸಿ ಬಿ ಗೆಲ್ಲಲೆಂದು ತೇರಿಗೆ ಬಾಳೆಹಣ್ಣು
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರ್ ಸಿಬಿ ತಂಡ ಕಪ್ ಗೆಲ್ಲುತ್ತೆ ಇಲ್ವೊ ಗೊತ್ತಿಲ್ಲ. ಆದರೆ ಅಭಿಮಾನಿಗಳು ಮಾತ್ರ ಈ ಸಲ ಕಪ್ ನಮ್ದೆ ಅಂತಾ ಹೇಳಿಕೊಂಡು ಸುತ್ತಾಡ್ತಿದ್ರು. ಹಾಡಿ ಕುಣಿತಿದ್ರು. ಆದ್ರೆ ಕಳೆದ 15 ವರ್ಷಗಳಿಂದ ಆರ್ ಸಿಬಿ ತಂಡ ಗೆಲುವಿನ ಕೊನೆ ಹಂತಕ್ಕೆ ತಲುಪಿ ಸೋಲನ್ನು ಅನುಭವಿಸುತ್ತಿದೆ. ಹೀಗಾಗಿ ಅಭಿಮಾನಿಯೊಬ್ಬ ಆರ್ ಸಿಬಿ ಈ ಬಾರಿ ಆದರೂ ಗೆಲ್ಲಬೇಕು ಅಂತಾ ವಿಭಿನ್ನವಾಗಿ ಪ್ರಾರ್ಥನೆ ಸಲ್ಲಿಸಿದ್ದಾನೆ.
ಹೌದು, ಧಾರವಾಡ ಜಿಲ್ಲೆ ಮನಸೂರು ಗ್ರಾಮದಲ್ಲಿ ನಡೆದ ಶ್ರೀ ಸಿದ್ದಪ್ಪಜ್ಜನ ರಥೋತ್ಸವದಲ್ಲಿ ಆರ್ ಸಿ ಬಿ ಫ್ಯಾನ್ಸ್ ಆರ್ ಸಿಬಿ ಗೆಲುವಿಗಾಗಿ ರಥದ ಮೇಲೆ ಬಾಳೆಹಣ್ಣು ತೂರಿದ್ದಾರೆ. ವಿಶೇಷ ಅಂದ್ರೆ ಬಾಳೆ ಹಣ್ಣಿನ ಮೇಲೆ ‘ಈ ಬಾರಿ ಆದರೂ ಆರ್ ಸಿಬಿ ಕಪ್ ಗೆಲ್ಲಲ್ಲಿ ದೇವರೆ' ಎಂದು ಬರೆಯಲಾಗಿತ್ತಂತೆ. ಈ ರೀತಿ ಬರೆದ ಬಾಳೆಹಣ್ಣನ್ನು ತೇರಿನ ಮೇಲೆ ಎಸೆದಿದ್ದಾರೆ. ಬಾಳೆಹಣ್ಣು ನೇರವಾಗಿ ತೇರಿನ ಕಳಸಕ್ಕೆ ತಾಗಿದ್ದು, ಇದು ಆರ್ ಸಿಬಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಆರ್ ಸಿಬಿ ಅಭಿಮಾನಿಗಳು ವಿಡಿಯೋ ನೋಡಿ ಈ ಬಾರಿ ಆದರೂ ಆರ್ ಸಿಬಿ ಗೆಲ್ಲವಂತಾಗಲಿ ಅಂತಾ ಪ್ರಾರ್ಥಿಸ್ತಾಯಿದ್ದಾರೆ.