ಮದ್ಯರಾತ್ರಿ ಮನೆ ಬಿದ್ದು, 7 ಜನ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ. ಅಕಾಲಿಕ ಮಳೆಗೆ ಏಕಾಏಕಿ ಮನೆ ಬಿದ್ದರಿಂದ ಮನೆಯಲ್ಲಿ ಮಲಗಿದ್ದ 7 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ . ಮಕ್ತುಂಬಿ ಚಿಮ್ಮನಕಟ್ಟಿ ಎನ್ನುವರ ಮನೆ ಇದಾಗಿದ್ದು , ಇಬ್ಬರು ಗಂಡು ಮಕ್ಕಳು , ಇಬ್ಬರು ಸೊಸೆಯಂದಿರು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ . ಇದ್ದ ಮನೆ ಅಕಾಲಿಕ ಮಳೆಗೆ ಬಿದ್ದರಿಂದ ಈ ಚಿಮ್ಮನಕಟ್ಟಿ ಕುಟುಂಬಕ್ಕೆ ಮನೆ ಇಲ್ಲದಂತೆ ಆಗಿದೆ .ಅಕಾಲಿಕ ಮಳೆಗೆ ಧಾರವಾಡ ಜಿಲ್ಲೆಯಲ್ಲಿ ಬಹಳಷ್ಟು ಮನೆಗಳು ಬಿದ್ದು ಜನರು ಸೂರು ಇಲ್ಲದೇ ಪರದಾಡುವಂತೆ ಆಗಿದೆ. ಇದಕ್ಕೆ ತಕ್ಷಣ ಸ್ಪಂದಿಸುತ್ತುರುವ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಸೂರು ಕಳೆದುಕೊಂಡವರಿಗೆ ಮನೆ ಕಟ್ಟಿಕೊಡಲು ಪರಿಹಾರ ಕೊಡುತ್ತಿದ್ದಾರೆ . ಈ ಕುಟುಂಬದತ್ತಲೂ ಜಿಲ್ಲಾಡಳಿತ ನೋಡಬೇಕಿದೆ. ಅಂದಾಗ ಮಾತ್ರ ನೊಂದ ಜೀವಗಳಿಗೆ ಪರಿಹಾರದ ಆಸೆ ಚಿಗುರಿ ಹೊಸ ಕನಸಿನ ಮನೆ ಸಿಕ್ಕಂತೆ ಆಗುತ್ತೆ.