ಪಕ್ಷ ವಿರೋಧಿ ಚಟುವಟಿಕೆ ಆರೋಪ; ಡಿ.ಟಿ.ಶ್ರೀನಿವಾಸ್ ಉಚ್ಚಾಟನೆ ಆದೇಶ ಹಿಂಪಡೆದ ಬಿಜೆಪಿ

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಈಗಾಗಲೇ ರಾಜಕೀಯ ನಾಯಕರು ಪ್ರಚಾರದ ಬೇಟೆಗೆ ಇಳಿದಿದ್ದಾರೆ. ಇದೀಗ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಜೆಪಿ ಪಣ ತೊಟ್ಟಿದೆ.
ಹಾಗಾಗಿ ಕೇಂದ್ರ ನಾಯಕರು ರಾಜ್ಯಕ್ಕೆ ಬಂದು ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ.
ಕಳೆದ ಎರಡು ವರ್ಸಗಳ ಹಿಂದೆ ಅವರು ಪಕ್ಷದ ಸೂಚನೆ ಕಡೆಗಣಿಸಿದ್ದರು. ನಂತರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದರು. ಈ ಹಿನ್ನೆಲೆಯಲ್ಲಿ ಡಿ.ಟಿ.ಶ್ರೀನಿವಾಸ್ ಅವರನ್ನು 2020 ರಲ್ಲಿ ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶ್ರೀನಿವಾಸ್ ಅವರು ಕಣದಿಂದ ಹಿಂದಕ್ಕೆ ಸರಿಯುವಂತೆ ತಿಳಿಸಿದ್ದರೂ ಪಕ್ಷದ ಸೂಚನೆ ಕಡೆಗಣಿಸಿದ್ದರು. ಆದ್ದರಿಂದ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಆದೇಶಿಸಿತ್ತು. ಆದರೆ ಇದೀಗ ಆದ್ರೆ, ಇದೀಗ ಶಿಸ್ತು ಸಮಿತಿ ತನ್ನ ಆದೇಶ ವಾಪಸ್ ಪಡೆದಿದೆ.
ಮೋದಿನೂ ಇಲ್ಲಾ ಯಾರೂ ಇಲ್ಲ, ನಾನೇ ದೇವರು' : ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಆಡಿಯೋ ವೈರಲ್..?
ರಾಯಚೂರು : ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ರಾಜಕೀಯ ನಾಯಕರುಗಳ ಆರೋಪ, ಪ್ರತ್ಯಾರೋಪ ಕೇಳಿ ಬರುತ್ತಿದೆ.ಈ ಹೊತ್ತಲ್ಲೇ ರಾಯಚೂರು ಬಿಜೆಪಿ ಶಾಸಕ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಭಾರೀ ವೈರಲ್ ಆಗಿದೆ. ''ಮೋದಿನೂ ಇಲ್ಲಾ ಯಾರೂ ಇಲ್ಲ, ನಾನು ಸಿಂಗಲ್ ಆರ್ಮಿ, 'ನಾನೇ ಎಲ್ಲಾ, ದೇವರು ನಾನೇ ಎಂದು ರಾಯಚೂರು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.'ಚುನಾವಣೆಯಲ್ಲಿ ಸೋತರು ಚಿಂತೆಯಿಲ್ಲ, ಗೆದ್ದವರು ಚಿಂತೆಯಿಲ್ಲ, ನಾನು ದೇವರು ಇದ್ದ ಹಾಗೆ, ಅದಕ್ಕೆ ಹುಡುಗರಿಗೆ ಪ್ರತಿ ದಿನ ನನ್ನ ಕಾಲಿಗೆ ಬೀಳಲು ಹೇಳುತ್ತೇನೆ' ಎಂದು ಆಪ್ತರ ಜೊತೆ ಮಾತನಾಡಿದ್ದಾರೆ ಎನ್ನಲಾದ 3 ನಿಮಿಷದ ಆಡಿಯೋ ವೈರಲ್ ಆಗಿದೆ.