ಅಫ್ಘಾನ್ ನಿಂದ ಭಾರತಕ್ಕೆ ಬಂದ 16 ಜನರಿಗೆ ಕೊರೋನಾ ಪಾಸಿಟಿವ್

ಅಫ್ಘಾನ್ ನಿಂದ ಭಾರತಕ್ಕೆ ಬಂದ 16 ಜನರಿಗೆ ಕೊರೋನಾ ಪಾಸಿಟಿವ್

ದೆಹಲಿ : ಅಫ್ಘಾನಿಸ್ತಾದಲ್ಲಿ ಸಿಲುಕಿದ್ದ 78 ಭಾರತೀಯರನ್ನು ರಕ್ಷಿಸಿ ವಾಪಸ್ ತಾಯ್ನಾಡಿಗೆ ಕರತರಲಾಗಿದ್ದು, ಅವರಲ್ಲಿ 16 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಭಾರತೀಯ ವಾಯುಪಡೆ ತನ್ನ ವಿಶೇಷ ವಿಮಾನಗಳ ಮೂಲಕ ಅಫ್ಘಾನ್ ನಲ್ಲಿರುವ ಭಾರತೀಯರನ್ನು ರಕ್ಷಿಸುತ್ತಿದ್ದು, ಮಂಗಳವಾರ 78 ಮಂದಿ ದೆಹಲಿ ತಲುಪಿದ್ದರು.

ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 16 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮುಂಜಾಗ್ರತಾ ಕ್ರಮವಾಗಿ ಎಲ್ಲಾ 78 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಈವರೆಗೂ 228 ಮಂದಿ ಭಾರತೀಯರು ಸೇರಿದಂತೆ 626 ಜನರನ್ನು ಭಾರತ ಅಫ್ಘಾನ್ ನಿಂದ ರಕ್ಷಣೆ ಮಾಡಿದೆ.