ಮೇಯರ್‌ ಸ್ಥಾನದಲ್ಲಿದ್ದ ಎರಿಕ್‌ ಗಾರ್ಸೆಟ್ಟಿ ಇನ್ನು ಭಾರತದಲ್ಲಿನ ಅಮೆರಿಕದ ರಾಯಭಾರಿ

ಮೇಯರ್‌ ಸ್ಥಾನದಲ್ಲಿದ್ದ ಎರಿಕ್‌ ಗಾರ್ಸೆಟ್ಟಿ ಇನ್ನು ಭಾರತದಲ್ಲಿನ ಅಮೆರಿಕದ ರಾಯಭಾರಿ

ವಾಷಿಂಗ್ಟನ್‌: ಲಾಸ್‌ ಏಂಜಲೀಸ್‌ನ ಮೇಯರ್‌ ಎರಿಕ್‌ ಗಾರ್ಸೆಟ್ಟಿ ಅವರನ್ನು ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಲು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ನಿರ್ಧರಿಸಿದ್ದಾರೆ.

ಶ್ವೇತಭವನ ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದು, ಇದಕ್ಕೆ ಸೆನೆಟ್‌ ಒಪ್ಪಿಗೆ ನೀಡಬೇಕಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್‌ ದೇಶಗಳು ಸೇರಿ ಕ್ವಾಡ್‌ ಗುಂಪನ್ನು ರಚಿಸಿಕೊಂಡಿವೆ. ಜತೆಗೆ, ದಕ್ಷಿಣ ಏಷ್ಯಾದಲ್ಲಿ ಚೀನಾದ ಪಾರಮ್ಯ ಹೆಚ್ಚಾಗುತ್ತಿದ್ದು, ಇದನ್ನು ನಿಭಾಯಿಸಲು ಒಬ್ಬ ದಕ್ಷ ಆಡಳಿತಗಾರನ ಅಗತ್ಯವಿದೆ. ಹೀಗಾಗಿ, ತಮ್ಮ ಆಪ್ತ ಬಳಗದಲ್ಲಿರುವ ಲಾಸ್‌ ಏಂಜಲೀಸ್‌ ರಾಯಭಾರಿಯನ್ನು ಭಾರತದ ರಾಯಭಾರ ಹುದ್ದೆಗಾಗಿ ಬೈಡೆನ್‌ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಇದೇ ಮೊದಲ ಬಾರಿಗೆ ಅಮೆರಿಕದ ಇತಿಹಾಸದಲ್ಲೇ ಮೇಯರ್‌ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು, ರಾಜೀನಾಮೆ ನೀಡಿ ರಾಯಭಾರಿ ಹುದ್ದೆಗೆ ತೆರಳುತ್ತಿದ್ದಾರೆ ಎಂಬುದು ವಿಶೇಷ.