ಧಾರವಾಡ ಬೈಪಾಸ್ನಲ್ಲಿ ಸರಣಿ ಅಪಘಾತ ಟ್ಯಾಂಕರ್ ಚಾಲಕ ಸಾವು | Accident Car | Dharwad |
ಕಾರು, ಲಾರಿ ಹಾಗೂ ಟ್ಯಾಂಕರ್ ವಾಹನಗಳ ಮಧ್ಯೆ ಸರಣಿ ಅಪಘಾತ ನಡೆದು, ಟ್ಯಾಂಕರ್ ವಾಹನದ ಚಾಲಕ ಸಾವನ್ನಪ್ಪಿರುವ ಘಟನೆ ಧಾರವಾಡದ ತಪೋವನದ ಬಳಿ ಇರುವ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಟ್ಯಾಂಕರ್ ಹಾಗೂ ಲಾರಿ ಮಧ್ಯೆ ಮೊದಲು ಅಪಘಾತ ನಡೆದಿದೆ. ನಂತರ ಹಿಂಬದಿಯಿಂದ ಕಾರು ಗುದ್ದಿದೆ. ಇದರಿಂದಾಗಿ ಟ್ಯಾಂಕರ್ ವಾಹನದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರಿಗೆ ಗಾಯವಾಗಿದೆ. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.