ವಿವಿಧ ಬೇಡಿಕೆಗೆ ಆಗ್ರಹಿಸಿ, ರೈತರ ಪ್ರತಿಭಟನೆ.

ಧಾರವಾಡ.

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ, ಗ್ರಾಮೀಣ ಭಾಗಗದ ರೈತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ರು. ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಹೆಸರು ಬೆಳೆಗೆ ಬೆಂಬಲ ನೀಡ್ತವಿ ಅಂತಾ ಹೇಳಿ ಸರ್ಕಾರ ರೈತರಿಗೆ ಅನ್ಯಾಯ ಮಾಡ್ತಿದೆ, ಎಂದು ರೈತರು ಹೆಸರು ಕಾಳ ಚಿಲಾ ತಂದು ಪ್ರತಿಭಟನೆ ನಡೆಸಿದ್ರು. ಬೆಂಬಲ ಬೆಲೆ ಕೇಂದ್ರ ತೆರೆಯುತ್ತವೆ ಅಂತಾ ಭರವಸೆ ನೀಡಿ, ಇನ್ನುವರಿಗೆ ಈಡೇರಿಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೋಗಿ ಆಕ್ರೋಶ ಹೊರಹಾಕಿದ್ರು. ಸರ್ಕಾರ ರೈತರ ಭರವಸೆ ಇನ್ನೂವರೆಗೂ ಈಡೇರಿಸಿಲ್ಲ, ಆದ್ರೆ ಹೆಸರು ಬೆಳೆ ರೈತರ ಮನೆಯಲ್ಲಿ ಹಾಳಾಗುವ ಪರಿಸ್ಥಿತಿ ತಲೆದೋರಿದೆ . ಆದ್ದರಿಂದ ನಾಳೆಯಿಂದಲೇ ಬೆಂಬಲ ಬೆಲೆಗೆ ಹೆಸರು ಬೆಳೆ ಕೊಂಡುಕೊಳ್ಳುವ ಪ್ರಕ್ರಿಯೆ ಪಾರಂಬಿಸಬೇಕು. ಹಿಂದಿನ ಭರವಸೆಗಳಾದ ಬೆಳೆ ಹಾನಿ, ಬೆಳೆವಿಮೆ , ಮುಂಗಾರು ಮಳೆಗೆ ಹಾನಿಯಾದ ಮನೆಗೆ ಪರಿಹಾರ ನೀಡುವ ಭರವಸೆ ಇವುಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಈ ರೈತರ ಸಮಸ್ಯೆಗಳನ್ನು ಆದಷ್ಟು ಬೇಗ ನೆರವೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.