ಲೋಕಾಯುಕ್ತ IGPಯಾಗಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ನೇಮಕ

ಲೋಕಾಯುಕ್ತ IGPಯಾಗಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ನೇಮಕ

ಬೆಂಗಳೂರು: ಲೋಕಾಯುಕ್ತ ಐಜಿಪಿಯಾಗಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ಲೋಕಾಯುಕ್ತ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಈ ಮೂಲಕ ಲೋಕಾಯುಕ್ತ ಮರು ಸ್ಥಾಪನೆ ಬಳಿಕ ಮತ್ತೊಬ್ಬ ಖಡಕ್ ಐಪಿಎಸ್ ಅಧಿಕಾರಿ ಲೋಕಾಯುಕ್ತಕ್ಕೆಸೇರ್ಪಡೆಯಾಗಿದ್ದಾರೆ. ಈ ಹಿಂದೆ ಸುಬ್ರಹ್ಮಣ್ಯೇಶ್ವರ ರಾವ್ ಸಿಬಿಐ ಬೆಂಗಳೂರು ಘಟಕದ ಎಸ್ ಪಿಯಾಗಿಯೂ ಕಾರ್ಯನಿರ್ವಹಿಸಿದ್ದರು.