ಆಸ್ಪತ್ರೆಗಳು ಇರುವುದು ಪ್ರಾಣ ಉಳಿಸಲಿಕ್ಕೆ ಹೊರತು, ತಾಂತ್ರಿಕ ಕಾರಣಗಳನ್ನೊಡ್ಡಿ ಸಾಯಿಸುವುದಕ್ಕಲ್ಲ .. ತಮ್ಮದೇ ಸರ್ಕಾರದ ವಿರುದ್ದ ಸುರೇಶ್ ಕುಮಾರ್ ಕಿಡಿ..

ಆಸ್ಪತ್ರೆಗಳು ಇರುವುದು ಪ್ರಾಣ ಉಳಿಸಲಿಕ್ಕೆ ಹೊರತು, ತಾಂತ್ರಿಕ ಕಾರಣಗಳನ್ನೊಡ್ಡಿ ಸಾಯಿಸುವುದಕ್ಕಲ್ಲ .. ತಮ್ಮದೇ ಸರ್ಕಾರದ ವಿರುದ್ದ ಸುರೇಶ್ ಕುಮಾರ್ ಕಿಡಿ..

ಬೆಂಗಳೂರು :ತುಮಕೂರು ಜಿಲ್ಲಾ ಆಸ್ಪತ್ರೆ ಯಲ್ಲಿ ತಾಯಿ ಮಕ್ಕಳ ಸಾವು ಹಿನ್ನೆಲೆ ಸ್ವಪಕ್ಷ ಶಾಸಕರು ತಮ್ಮದೇ ಸರ್ಕಾರದ ವಿರುದ್ದ ಸ್ವಪಕ್ಷ ಶಾಸಕರ ಅಸಮಾಧಾನ ಹೊರಹಾಕಿದ್ದಾರೆ. ಸುರೇಶ್ ಕುಮಾರ್ ಅವರು ಆಸ್ಪತ್ರೆಗಳು ಇರುವುದು ಪ್ರಾಣ ಉಳಿಸಲಿಕ್ಕೆ ಹೊರತು,ತಾಂತ್ರಿಕ ಕಾರಣಗಳನ್ನೊಡ್ಡಿ ಸಾಯಿಸುವುದಕ್ಕಲ್ಲ ಎಂದು ಕಿಡಿಕಾರಿದ್ಧಾರೆ.

ಸುರೇಶ್​ ಕುಮಾರ್​ ಅವರು ಫೇಸ್​ಬುಕ್​ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಪರೋಕ್ಷವಾಗಿ ಹಿಂದಿನ ಬಳ್ಳಾರಿ ವಿಮ್ಸ್ ಆಸ್ಪತ್ರೆ ಘಟನೆ ಬಗ್ಗೆ ಕಿಡಿ ಕಾರಿದ್ದು, ವಿದ್ಯುತ್ ವ್ಯತೆಯದಿಂದ ವೆಂಟಿಲೇಟರ್ ಕೈ ಕೊಟ್ಡು, ಸಾವನ್ನಪ್ಪಿದ್ದ ರೋಗಿಗಳು,ಬಡ ರೋಗಿಗಳು ತಾಂತ್ರಿಕ ಕಾರಣಗಳಿಂದಲೇ ಅಂದು ಸಾವನ್ನಪ್ಪಿದ್ದರು. ಇದೀಗ ತಾಂತ್ರಿಕ ಕಾರಣಗಳನ್ನೊಡ್ಡಿ ಸಾಯಿಸುವುದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ಧಾರೆ.