ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಲು  ಕಮ್ಯಾಂಡೋಗಳಿAದ ಅಣಕು ಪ್ರದರ್ಶನ

ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಲು  ಕಮ್ಯಾಂಡೋಗಳಿAದ ಅಣಕು ಪ್ರದರ್ಶನ

ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಲು  ಕಮ್ಯಾಂಡೋಗಳಿAದ ಅಣಕು ಪ್ರದರ್ಶನ

ನವದೆಹಲಿ: ಭಯೋತ್ಪಾದಕ ದಾಳಿಯಾದ ಸಂದರ್ಭದಲ್ಲಿ ಪ್ರತಿಕ್ರಿಯಿಸಬೇಕಾದ ರೀತಿಯ ಪೂರ್ವಸಿದ್ಧತೆಯಗಿ ಎಎಜಿ ಕಮ್ಯಾಂಡೋ ಪಡೆಗಳು ದೇಶಾದ್ಯಂತ ಪ್ರಮುಖ ಸ್ಥಳಗಳಲ್ಲಿ ಅಣಕು ಪ್ರದರ್ಶನ ನಡೆಸಿವೆ. ಗಾಂಡಿವ್ ಹೆಸರಿನ ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಸೇರಿದಂತೆ ವಿಚ್ಛಿದ್ರಕಾರಿ ಶಕ್ತಿಗಳು ದಾಳಿ ಮಾಡಿದಾಗ ಹೇಗೆ ಪ್ರತಿಕ್ರಿಯಿಸಬೇಕು. ಆಯಾ ಪ್ರದೇಶಗಳು ಗುಣಲಕ್ಷಣಗಳೇನು, ಭೌಗೋಳಿಕ ಆಯಕಟ್ಟುಗಳೇನು ಎಂಬೆಲ್ಲಾ ಮಾಹಿತಿಗಳನ್ನು ಅಣಕು ಪ್ರದರ್ಶನದ ವೇಳೆ ಮನದಟ್ಟು ಮಾಡಿಕೊಳ್ಳಲಾಗುತ್ತದೆ.

ಸಮಾಜಘಾತಕ ಶಕ್ತಿಗಳು ವಾಹನಗಳನ್ನು ಹೈಜಾಕ್ ಮಾಡಿದರೆ, ದೇಶಿಯ ಹಾಗೂ ಅಂತರರಾಷ್ಟ್ರೀಯ ಪ್ರಜೆಗಳು ಹಾಗೂ ಗಣ್ಯರನ್ನು ಒತ್ತೆಯಾಳಾಗಿಟ್ಟುಕೊಂಡಾಗ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬ ಕುರಿತು ಶಸ್ತ್ರಸ್ತ್ರಸಜ್ಜಿತ ಯೋಧರು ಮಾಡ್ರಿಲ್ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತಾ ಪಡೆ ಆಗಸ್ಟ್ ೨೨ರಿಂದ ೨೮ರ ನಡುವೆ ಅಣಕು ಪ್ರದರ್ಶನ ನಡೆಸುವುದಾಗಿ ಪ್ರಕಟಿಸಿದೆ.
ಅದಕ್ಕಾಗಿ ದೇಶದ ಆಯಾಕಟ್ಟಿನ ೩೫ ಸ್ಥಳಗಳನ್ನು ಗುರುತಿಸಲಾಗಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ತಮಿಳುನಾಡು, ಹೈದರಾಬಾದ್ ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಮೊದಲ ಹಂತದ ಅಣಕು ಪ್ರದರ್ಶನಗಳು ನಡೆಯುತ್ತಿವೆ. ಆಯ್ದುಕೊಂಡ ರಾಜ್ಯಗಳಲ್ಲಿ ಪ್ರಮುಖವಾದ ಸ್ಥಳಗಳು, ಕಚೇರಿಗಳು, ಪ್ರವಾಸಿ ತಾಣಗಳು, ಜನನಿಬೀಡ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಕಮಾಂಡೋಗಳು ಪೂರ್ವ ತಯಾರಿ ನಡೆಸಿದ್ದಾರೆ.
ಆಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶ ಪಡಿಸಿಕೊಂಡ ಬಳಿಕ, ಅಂತರರಾಷ್ಟ್ರೀಯ ಭಯೋತ್ಪಾದನಾ ಕೇಂದ್ರ ಐಸ್ಸಿಸ್ ಕೂಡ ಬಾಲ ಬಿಚ್ಚುತ್ತಿದೆ. ಐಸ್ಸಿ???ಗೆ ದೇಶದ ಹಲವು ರಾಜ್ಯಗಳಿಂದ ಯುವಕರನ್ನು ನಿಯೋಜಿಸಲಾಗಿದೆ. ಬಹಳಷ್ಟು ಮಂದಿ ದೇಶದೊಳಗೆ ಇದ್ದು, ದೇಶದ್ರೋಹದ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ.
ಹಾಗಾಗಿ ಯಾವುದೇ ಸಂದರ್ಭದಲ್ಲಾದರೂ ಅನಾಹುತಕಾರಿ ಘಟನೆಗಳು ನಡೆಯಬಹುದು. ಪೂರ್ವ ಸಿದ್ಧತೆ ಇಲ್ಲದೆ ಇದ್ದರೆ ೨೦೦೮ರ ಮುಂಬೈನ ದಾಳಿ ಮಾದರಿಯಲ್ಲಿ ಮತ್ತೊಂದು ದುರ್ಘಟನೆ ನಡೆಯಬಹುದು. ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಎಎಜಿ ಪಡೆಯ ಅಧಿಕಾರಿ ಹೇಳಿದ್ದಾರೆ.